ಕಾಡಜ್ಜಿ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಶಿಕ್ಷಕರ ದಿನಾಚರಣೆ

ಕಾಡಜ್ಜಿ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಶಿಕ್ಷಕರ ದಿನಾಚರಣೆ

ದಾವಣಗೆರೆ, ಸೆ.9- ಕಾಡಜ್ಜಿ ಗ್ರಾಮದ ಡಿಜಿಟಲ್‌ ಗ್ರಂಥಾಲಯದಲ್ಲಿ ಈಚೆಗೆ ಓದುವ ಬೆಳಕು ಕಾರ್ಯಕ್ರಮದಡಿ ಶಿಕ್ಷಕರ ದಿನ ಆಚರಿಸಲಾಯಿತು.

ಓದುಗರು ಹಾಗೂ ವಿದ್ಯಾರ್ಥಿಗಳು ಗ್ರಂಥಾಲಯದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕೆಂದು ಪಿಡಿಒ ಎಲ್‌.ಎಸ್‌. ನಾಗರಾಜ್‌ ಹೇಳಿದರು.

ಈ ವೇಳೆ ಗ್ರಾ.ಪಂ ಸದಸ್ಯ ಉಮೇಶಯ್ಯ, ಡಿಜಿ ವಿಕಾಸನ ಜಿಲ್ಲಾ ಸಂಯೋಜಕ ಸುರೇಶನಾಯ್ಕ, ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಎಲ್‌. ಪರಮೇಶ್ವರಪ್ಪ, ಶಿಕ್ಷಕ ಬಸವರಾಜಪ್ಪ, ಗ್ರಂಥಾಲಯ ಮೇಲ್ವಿಚಾರಕ ಹೆಚ್‌. ರಾಜೇಶ್‌ ಮತ್ತು ಶಿಶು ಪಾಲನಾ ಕೇಂದ್ರದ ಆರೈಕೆದಾರರು ಇದ್ದರು. ವಿದ್ಯಾರ್ಥಿಗಳಾದ ಸಂಜನಾ, ಮೇಘನಾ, ಉಷಾ, ಚಂದನಾ ಮತ್ತು ಮಾನಸ ಪ್ರಾರ್ಥಿಸಿದರು.

error: Content is protected !!