ಹೊಳೆಸಿರಿಗೆರೆ : ಸಾಕ್ಷರತಾ ಸಪ್ತಾಹಕ್ಕೆ ಚಾಲನೆ

ಹೊಳೆಸಿರಿಗೆರೆ : ಸಾಕ್ಷರತಾ ಸಪ್ತಾಹಕ್ಕೆ ಚಾಲನೆ

ಮಲೇಬೆನ್ನೂರು, ಸೆ.9- ಹೊಳೆಸಿರಿಗೆರೆ ಗ್ರಾಮದ ಶ್ರೀ ಸುಭಾಷ್ ಚಂದ್ರ ಬೋಸ್ ಉಸ್ತುವಾರಿ ಮುಂದುವರಿಕೆ ಶಿಕ್ಷಣ ಕೇಂದ್ರದಲ್ಲಿ ಭಾನುವಾರ 59ನೇ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹದ ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷ ಎನ್.ಜಿ.ಮಂಜನಗೌಡ ನೆರವೇರಿಸಿದರು. 

ನಂತರ ಮಾತನಾಡಿದ ಅವರು, ಹಳ್ಳಿಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಕೆಲಸ ನಿರಂತರವಾಗಿ ಕೆಲಸ ಆಗಬೇಕೆಂದರು. 

ಪ್ರಗತಿಪರ ಚಿಂತಕ ಕುಂದೂರು ಮಂಜಪ್ಪ ಮಾತನಾಡಿ, ಬದುಕಿಗೆ ಅಕ್ಷರಬೇಕು. ಭೂಮಿಯಲ್ಲಿ ಬಿತ್ತಿದ ಬೀಜ. ಎದೆಯಲ್ಲಿ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲ ಕೊಡುತ್ತವೆ. 1992 – 93 ರಲ್ಲಿ ರಾಜ್ಯದಲ್ಲಿ ಸಾಕ್ಷರತಾ ಆಂದೋಲನ ಆರಂಭವಾಗಿತ್ತು. 

2001ರಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಶಿವರಾಂ ಅವರು ವಿವಿಧೋದ್ದೇಶ ಗ್ರಂಥಾಲಯ ಉದ್ಘಾಟಿಸಿದ್ದರು. ಅವು 2001 ರಿಂದ 2008 ರವರಿಗೆ ಯಶಸ್ವಿಯಾಗಿ ನಡೆದು, ನಂತರ ನಿಂತು ಹೋದವು. ಆದರೆ, ನಮ್ಮ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರ – ನೆರವಿನೊಂದಿಗೆ ಕಳೆದ 24 ವರ್ಷಗಳಿಂದ ಸತತವಾಗಿ ನಡೆಯುವ ಮೂಲಕ ಮಾದರಿ ಸಾಕ್ಷರತಾ ಗ್ರಾಮವಾಗಿದೆ ಎಂದ ಮಂಜಪ್ಪ ಅವರು, ಕೇಂದ್ರದ ಪ್ರೇರಕ ಎಂ.ಶಿವಕುಮಾರ್, ಉಪ ಪ್ರೇರಕಿ ಅನುಸೂಯಮ್ಮ ಅವರ ಶ್ರಮವನ್ನೂ ಸ್ಮರಿಸಿದರು. 

ತಾ.ಪಂ.ಮಾಜಿ ಸದಸ್ಯ ಕೆ.ಜಿ.ಕೊಟ್ರೇಶ್ ಗೌಡ್ರು, ತಿಪ್ಪೇಶಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದ ಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಇದ್ದರು. ಕೇಂದ್ರದ ಪ್ರೇರಕ ಎಂ.ಶಿವಕುಮಾರ್ ಸ್ವಾಗತಿಸಿದರು. ಉಪಪ್ರೇರಕರಾದ ಅನುಸೂಯಮ್ಮ ವಂದಿಸಿದರು. 

error: Content is protected !!