ಹರಿಹರ, ಸೆ.5- ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದ ಮುಂಭಾಗದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಹಾಗೂ ಹಿಂದೂ ಮಹಾ ಗಣಪತಿ ಸಂಘದಿಂದ 5ನೇ ವರ್ಷದ ಗಣೇಶೋತ್ಸವ ಅಂಗವಾಗಿ ನಾಡಿದ್ದು ದಿನಾಂಕ 7ರ ಶನಿವಾರ ಬೆಳಗ್ಗೆ 11 ಗಂಟೆಗೆ ಬೃಹತ್ ಪೆಂಡಲ್‌ನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಲಾಗುತ್ತದೆ.
ಶನಿವಾರ ಬೆಳಿಗ್ಗೆ ಗಣೇಶನಿಗೆ ವಿಶೇಷ ಪೂಜೆ ಅಲಂಕಾರ, ಪ್ರಸಾದ ವಿನಿಯೋಗವಿರುತ್ತದೆ. ಸಂಜೆ ವಿವಿಧ ಮಹಿಳಾ ಸಂಘದವರಿಂದ ಭಜನೆ ನಡೆಯಲಿದೆ.
ದಿನಾಂಕ 7 ರಿಂದ 29 ರವರೆಗೆ ಪ್ರತಿದಿನ ಬೆಳಿಗ್ಗೆ ವಿಶೇಷ ಪೂಜೆ, ಸಂಜೆ ಸಂಗೀತ, ನೃತ್ಯ, ಭಜನೆ, ವಿವಿಧ ಮನರಂಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಧಕರಿಂದ ಪ್ರವಚನಗಳು ನಡೆಯಲಿವೆ.
ದಿನಾಂಕ 16ರ ಸೋಮವಾರ ಬೆಳಿಗ್ಗೆ 8 ಕ್ಕೆ ಶಕ್ತಿ ದೇವತೆಗಳ ಸಮ್ಮುಖದಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಮನ್ಯು ಸೂಕ್ತ ಹೋಮ, ದೇವಿ ಸೂಕ್ತ ಹೋಮ ನಡೆಯಲಿದೆ.
ದಿನಾಂಕ 29 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಶೋಭಾಯಾತ್ರೆ ಮೆರವಣಿಗೆ ಜರುಗಲಿದೆ.
ಶೋಭಾಯಾತ್ರೆಯು ಡಿಜೆ ಸೌಂಡ್ ಸಿಸ್ಟಂ, ಸಮಾಳ, ಡ್ರಮ್ ಸೇಟ್ ಹಾಗೂ ವಿವಿಧ ಕಲಾ ಮೇಳಗಳೊಂದಿಗೆ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು, ಹಳೇ ಪಿ.ಬಿ.ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆಯ ಮುಖಾಂತರ ಹಾದು ಮೆಟ್ಟಿಲು ಹೊಳೆ ರಸ್ತೆಯ ಹತ್ತಿರ, ತುಂಗಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಸಮಿತಿ ಮುಖಂಡರಾದ ಬಸವನಗೌಡ್ರು, ದಿನೇಶ್, ಹೆಚ್.ಎಸ್.ರಾಘವೇಂದ್ರ, ಚಂದನ್ ಮೂರ್ಕಲ್, ಚಂದ್ರಕಾಂತ್ ಗೌಡ, ರಟ್ಟಿಹಳ್ಳಿ ಮಂಜುನಾಥ್, ರಾಜು ರೋಖಡೆ, ಅಜಿತ್ ಸಾವಂತ್, ಶ್ರೀನಿವಾಸ್ ಚಂದಪೂರ್, ಶಿವು ಗಜಪುರ, ಸ್ವಾತಿ ಹನುಮಂತ್, ಗಿರೀಶ್ ಗೌಡ, ಹರ್ಷ ದುರಗೋಜಿ, ಧರಣೇಂದ್ರ ಜೈನ್, ಅದ್ವೈತ ಶಾಸ್ತ್ರಿ, ಇತರರು ಹಾಜರಿದ್ದರು.