ದಾವಣಗೆರೆ, ಸೆ.4- ನಗರದ ಶ್ರೀ ವೀರಮಾಹೇಶ್ವರ ಸೊಸೈಟಿಯಿಂದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ದಾವಣಗೆರೆ ಜಿಲ್ಲೆಯ ಜಂಗಮ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇದೇ ದಿನಾಂಕ 14 ಕೊನೆ ದಿನ. ಆಸಕ್ತರು ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಕೆ.ಬಿ. ಬಡಾವಣೆ, ಬಳ್ಳಾರಿ ಸಿದ್ಧಮ್ಮ ಪಾರ್ಕ್ ಹತ್ತಿರ ಇಲ್ಲಿಗೆ ಅರ್ಜಿ ಸಲ್ಲಿಸಬೇಕು.