ಹಡಗಲಿ, ಸೆ. 4- ತಾಲ್ಲೂಕಿನ ಅಂಕಲಿ ಗ್ರಾಮದ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಸಮಾರು 40 – 42 ವರ್ಷದ ಅಪರಿಚಿತ ವ್ಯಕ್ತಿಯ ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತನ ಬಲ ಕೈ ಮೇಲೆ ಮಾಮ್ ಡ್ಯಾಡ್ ಟ್ಯಾಟೋ, ಎಡ ಎದೆಯ ಮೇಲೆ ಶಿಲ್ಪ, ಬಲ ಕುತ್ತಿಗೆ ಹತ್ತಿರ ತ್ರಿಶೂಲ ಹಾಗೂ ಎಡ ಕೈ ರಟ್ಟಿಯ ಕೆಳಗೆ ಸುತ್ತಲೂ ವಿ ಆಕಾರದ ಟ್ಯಾಟೋ ಗುರುತು, ಬಲ ಕಿವಿಯಲ್ಲಿ ಸಿಲ್ವರ್ ರಿಂಗ್, ಬಲಗಾಲಿನಲ್ಲಿ ಕರಿ ಬಣ್ಣದ ಉಣ್ಣೆದಾರ ಇರುತ್ತವೆ. ಹಸಿರು ಬಣ್ಣದ ಟೀ ಶರ್ಟ್, ಒಳಗೆ ಬಿಳಿ ಬಣ್ಣದ ಕಟ್ ಬನಿಯನ್, ಕಪ್ಪು ಬಣ್ಣದ ಕೆಂಪು ಗೆರೆಯುಳ್ಳ ಬರ್ಮೋಡ ಹಾಗೂ ಕರಿ ನೀಲಿ ಬಣ್ಣದ ಅಂಡರ್ ವೇರ್ ಧರಿಸಿರುತ್ತಾನೆ. ಸಂಬಂಧಪಟ್ಟವರು ಹಡಗಲಿ ಪೊಲೀಸ್ ಠಾಣೆ ಉಪ ನಿರೀಕ್ಷಕರು (94808 05780), ಪೊಲೀಸ್ ವೃತ್ತ (94808 05737) ವನ್ನು ಸಂಪರ್ಕಿಸಬಹುದು.
January 15, 2025