ಅಂಚೆ ಕುಂಚ ಚಿತ್ರ ಬರೆಯುವ ಸ್ಪರ್ಧೆ

ದಾವಣಗೆರೆ, ಸೆ. 3 – ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡಿನಲ್ಲಿ ಶ್ರೀ ಗಣೇಶನ ಚಿತ್ರ ಬರೆಯುವ ರಾಜ್ಯ ಮಟ್ಟದ ಉಚಿತ ಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 

ವಿವಿಧ ಕಲಾ ಪ್ರಕಾರಗಳಲ್ಲಿ ಶ್ರೀ ಗಣಪತಿ ಚಿತ್ರ ಬರೆಯಬಹುದು.  ಚಿತ್ರ ಬರೆದು ಕಳಿಸುವ ವಿಳಾಸ ಕಲಾ ಕುಂಚ # 588, `ಕನ್ನಡ ಕೃಪ’, ಮೊದಲನೇ ಮಹಡಿ, ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ – 577002.

ಹೆಚ್ಚಿನ ಮಾಹಿತಿಗೆ 95387 32777 ಸಂಪರ್ಕಿಸಬಹುದು. 

ಚಿತ್ರ ಬರೆದು ಕಳಿಸುವ ಕೊನೆಯ ದಿನಾಂಕ 15  ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ತಿಳಿಸಿದ್ದಾರೆ.

error: Content is protected !!