ಶೀಘ್ರ ಸಿರಿಗೆರೆ ಶ್ರೀಗಳಿಂದ ಕೆರೆಗಳ ವೀಕ್ಷಣೆ

ಶೀಘ್ರ ಸಿರಿಗೆರೆ ಶ್ರೀಗಳಿಂದ ಕೆರೆಗಳ ವೀಕ್ಷಣೆ

ಜಗಳೂರಿನ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಸೆ.2- 57ಕೆರೆ ತುಂಬಿಸುವ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು. ಈಗಾಗಾಲೇ 31ಕೆರೆಗಳಿಗೆ ತುಂಗೆ ಭದ್ರೆ ಹರಿದಿದ್ದಾಳೆ. ಇನ್ನು ಒಂದು ವಾರದಲ್ಲಿ  ತಾಲ್ಲೂಕಿನ 40 ಕೆರೆಗಳಿಗೆ ನೀರು ಹರಿದು ಬಂದ ನಂತರ ಸಿರಿಗೆರೆ ಶ್ರೀಗಳು ಕೆರೆಗಳ ವೀಕ್ಷಣೆ ಹಾಗೂ ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ‌ ನೀಡಲಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಸಿರಿಗೆರೆ ಶ್ರೀಗಳು ಕೆರೆವೀಕ್ಷಣೆ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿರಿಗೆರೆ ಶ್ರೀಗಳು ಕೆರೆ ವೀಕ್ಷಣೆಗೆ ಆಗಮಿಸಲು ಸಮ್ಮತಿ ನೀಡಿದ್ದಾರೆ. ಮಾಜಿ ಶಾಸಕರು ಹಾಗೂ ಮುಖಂಡರನ್ನೊಳಗೊಂಡ 10 ಜನ ಸಿದ್ದತಾ ಸಮಿತಿ ರಚಿಸಿ ಕೆರೆ ವೀಕ್ಷಣೆ ಕಾರ್ಯಕ್ರಮದ ರೂಪರೇಶೆ ತಯಾರಿಸೋಣ. ಮುಕ್ತಾಯ ಸಮಾರಂಭವನ್ನು ಬಯಲು ರಂಗಮಂದಿರದಲ್ಲಿ ಅದ್ದೂರಿಯಾಗಿ ಆಯೋಜಿಸೋಣ. ಭಕ್ತಸಮೂಹ ಪಕ್ಷಾತೀತವಾಗಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಹಗಲು ವೇಳೆ ಕೆರೆಗಳಿಗೆ ನೀರು ಹರಿಸಿ ರಾತ್ರಿ ವೇಳೆ ರೈತರು ವಾಲ್ ತಿರುಗಿಸುವ ಕುಂಟು ನೆಪಯೊ ಡ್ಡಿ ನೀರು ಹರಿಸುವುದನ್ನು ತಡೆಹಿಡಿಯಬೇಡಿ.ಇದುವರೆಗೂ ಎಇಇ ಶ್ರೀಧರ್, ಕೆಳದರ್ಜೆ ಗುತ್ತಿಗೆದಾರರಾದ ಭೀಮಣ್ಣ, ಆನಂದಪ್ಪ, ಅವರ ಶ್ರಮ ಅಪಾರವಿದೆ. ರೈತರ ವಿಶ್ವಾಸ ಗಳಿಸಬೇಕು.ಮುಖ್ಯಗುತ್ತಿಗೆದಾರ ಶಂಕರ್ ಅವರ ಕಾರ್ಯವೈಖರಿ ಬೇಸರ ತಂದಿದೆ ಎಂದು ಸೂಚಿಸಿದರು.

ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದ್ದ ಭದ್ರಾಮೇಲ್ದಂಡೆ ಯೋಜನೆ ಕೇಂದ್ರ ಜಲನಿಗಮದಡಿ ರಾಷ್ಟ್ರೀಯ ಯೋಜನೆಗೆ ಸೇರ್ಪಡೆಗೊಂಡಿಲ್ಲ. ಕೇವಲ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ 200 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, 130 ಕೋಟಿ ಹಣ ಬಿಡುಗಡೆಗೊಂಡಿದೆ. ಯೋಜನೆ ಸಾಕಾರಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ ಎಂದು ಶಾಸಕರು ಭರವಸೆ ನೀಡಿದರು.

ತಾಲೂಕಿನ ಮಾಗಡಿ ಬಳಿ 20ಎಕರೆ ವ್ಯಾಪ್ತಿಯಲ್ಲಿ ಕೇಂದ್ರಿಯ ಏಕಲವ್ಯ ವಸತಿ  ಶಾಲೆ  ನಿರ್ಮಾಣಕ್ಕೆ  2 5ಕೋಟಿ  ಅನುದಾನ ಬಿಡುಗಡೆ ಗೊಂಡಿದ್ದು. 10 ಎಕರೆ ಮಂಜೂರಾಗಿದೆ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತ ನಾಡಿ, ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭರಮಸಾಗರ ಹಾಗೂ ಜಗಳೂರು ಕೆರೆ ತುಂಬಿಸುವ ಯೋಜನೆಯ ಅವಳಿ ಕೂಸುಗಳು ಜನಿಸಿದ್ದು. ಮೂರು ಜನ ಮುಖ್ಯಮಂತ್ರಿ, ಮೂರು ಜನ ಶಾಸಕರ ಕಾಳಜಿಯಿಂದ ಯೋಜನೆ ಸಾಕಾರಗೊಂಡು ತಾಲ್ಲೂಕಿನ ಕೆರೆಗಳಿಗೆ ನೀರು ಹರಿದಿವೆ. ರಂಗಯ್ಯನ ದುರ್ಗ ಅರಣ್ಯ ಪ್ರದೇಶದ ಮಾಗಡಿ, ಅಗಸನಹಳ್ಳಿ, ಗುರುಸಿದ್ದಾಪುರ ಕೆರೆಗಳಿಗೆ ಇಲಾಖೆಯ ಕಾನೂನು ತೊಡಕಿನಿಂದ‌ ಮತ್ತು ತೊರೆಸಾಲು ಭಾಗದ ಕೆರೆಗಳಿಗೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದ್ದು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಗಮನಹರಿಸಿದ್ದಾರೆ’ಎಂದು ತಿಳಿಸಿದರು.

ನೀರಾವರಿ ಇಲಾಖೆ ಎಇಇ ಶ್ರೀಧರ್ ಮಾತನಾಡಿ,’2022 ನೇ ಇಸ್ವಿಯಲ್ಲಿ  ತುಪ್ಪದಹಳ್ಳಿ ಕೆರೆಗೆ,2023 ರಲ್ಲಿ 11 ಕೆರೆಗಳಿಗೆ, 2024 ರಲ್ಲಿ ಒಟ್ಟಾರೆಯಾಗಿ 31‌ಕೆರೆಗಳಿಗೆ ನೀರು‌ಹರಿಸಲಾಗಿದೆ. ವಾರದೊಳಗೆ 7ಕೆರೆಗಳಿಗೆ ನೀರು ಹರಿಸಲಾಗು ವುದು. ಒಟ್ಟು 8‌ಮೋಟಾರ್ ಗಳಲ್ಲಿ 4 ಮೋಟಾರ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು.ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡನಂತರ ಹಂತ ಹಂತವಾಗಿ ಹೆಚ್ಚುವರಿ ಮೋಟರ್ ಗೆ ಚಾಲನೆ ನೀಡ ಲಾಗುವುದು. ರೈತರು ಪೈಪ್ ಲೈನ್ ಕಾಮಗಾರಿಗೆ ಸಹಕರಿಸಬೇಕು. ಭದ್ರಾಅಚ್ಚುಕಟ್ಟು ಒಳಹರಿವು ಹೆಚ್ಚಾಗಿದ್ದು ಇನ್ನೂ 2ರಿಂದ 3‌ತಿಂಗಳು ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಮಾಹಿತಿ‌ ನೀಡಿದರು.

ಈ ಸಂದರ್ಭದಲ್ಲಿ  ಮುಖಂಡರಾದ ಕೆ.ಬಿ.ಕಲ್ಲೇರುದ್ರೇಶ್, ಕೆ.ಪಿ.ಪಾಲಯ್ಯ, ಷಂಷೀರ್ ಅಹಮ್ಮದ್, ವಕೀಲ ಕೆ.ಎಂ.ಬಸವರಾಜಪ್ಪ, ಶಿವಣ್ಣಗೌಡ, ಎಂ.ಎಸ್. ಪಾಟೀಲ್, ಓಂಕಾರಪ್ಪ, ಸಿರಿಗೆರೆ ನಾಗರಾಜ್, ಶಶಿ ಪಾಟೀಲ್, ಲೋಕೇಶ್, ಪರಮೇಶ್ವರಪ್ಪ, ಸುರೇಶ್ ಗೌಡ್ರು, ಚಂದ್ರನಾಯ್ಕ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!