ವಿಮಾ ಸಪ್ತಾಹದಲ್ಲಿ ಹರಪನಹಳ್ಳಿ ಶಾಖಾಧಿಕಾರಿ ಹೆಚ್.ಜಿ.ರಾಜೇಶ್
ಹರಪನಹಳ್ಳಿ, ಸೆ.2- ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹಾಗೂ ಹಣಕಾಸು ಸಚಿವರಾದ ಸಿ.ಡಿ.ದೇಶಮುಖ್ ರವರ ದೂರದೃಷ್ಟಿಯ ಧ್ಯೋತಕವಾಗಿ 1956 ಸೆ.1 ರಂದು ರಾಷ್ರ್ಟೀಕರಣಗೊಂಡ ಭಾರತೀಯ ಜೀವ ವಿಮಾ ನಿಗಮ ಇಂದಿಗೂ ಅನೇಕ ಖಾಸಗಿ ವಿಮಾ ಕಂಪನಿಗಳ ಪೈಪೋಟಿಗಳ ಮಧ್ಯೆಯೂ ಮುಂಚೂಣಿ ವ್ಯವಹಾರದ ಮೂಲಕ ವಿಮಾ ರಂಗದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದೆ ಎಂದು ಹರಪನಹಳ್ಳಿ ಶಾಖಾಧಿಕಾರಿ ಹೆಚ್.ಜಿ.ರಾಜೇಶ್ ಹೇಳಿದರು.
ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಕಚೇರಿಯಲ್ಲಿ ಜರುಗಿದ 68 ನೇ ವರ್ಷದ ವಿಮಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ನಮ್ಮ ವಿಮಾ ಸಂಸ್ಥೆಯಲ್ಲಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವೇ ಕಾರಣ. ಸಂಸ್ಥೆಯಲ್ಲಿ ಪ್ರತಿನಿಧಿಗಳ ಅವಿರತ ಶ್ರಮ, ಸಿಬ್ಬಂದಿಗಳ ಪ್ರಾಮಾ ಣಿಕ ಸೇವೆಯಿಂದ ಸಾಧ್ಯವಾಗಿದೆ ಎಂದರು.
ವಿಮಾ ನೌಕರರ ಸಂಘದ ಅಧ್ಯಕ್ಷ ಕೆ.ಹನುಮಂತಪ್ಪ ಮಾತನಾಡಿ, ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಪಂಚವಾರ್ಷಿಕ ಯೋಜನೆಗಳ ಮುಖಾಂತರ ಹಣ ಒದಗಿಸುತ್ತಿದೆ ಎಂದರು.
ಆಡಳಿತಾಧಿಕಾರಿ ಕೆ.ಹೆಚ್ ಬಸವರಾಜ್ ಮಾತನಾಡಿ, ಅವಧಿ ಮುಗಿದ ಹಾಗೂ ಮರಣ ದಾವೆ ಹಣ ಕೊಡುವಲ್ಲಿ ಎಲ್ಐಸಿ ಮಂಚೂಣಿಯಲ್ಲಿದ್ದು, ಪಾಲಿಸಿದಾರರಿಗೆ ಉತ್ತಮ ಸೌಲಭ್ಯ ಒದಗಿಸುತ್ತಿದೆ ಎಂದರು.
ಶಾಖೆಯ ಇಂದಿನ ಪ್ರಥಮ ಪಾಲಿಸಿದಾರ ಸಣ್ಣ ರಂಗಪ್ಪ ಆರಂಭದಲ್ಲಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಉಪ ಶಾಖಾಧಿಕಾರಿ ಅಜಿತ್ ರಾಯರೆಡ್ಡಿ, ಅಭಿವೃದ್ಧಿ ಅಧಿಕಾರಿ ಸಿದ್ದರಾಮೇಶ, ವೆಂಕಪ್ಪ ಗೊಲ್ಲರ, ನೌಕರರ ಸಂಘದ ಕಾರ್ಯದರ್ಶಿ ನಾಗನಗೌಡ, ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಂ. ಅಂಬಣ್ಣ, ರಾಯಚೂರು ವಿಭಾಗೀಯ ಮುಖ್ಯ ಜೀವ ವಿಮಾ ಸಲಹೆಗಾರರ ವಿಭಾಗೀಯ ಅಧ್ಯಕ್ಷ ಹೇಮಣ್ಣ ಮೋರಿಗೇರಿ ಮಾತನಾಡಿದರು.
ಸಹಾಯಕ ಆಡಳಿತಾಧಿಕಾರಿಗಳಾದ ಹಿಮಾಂಶು, ಶಿವಕುಮಾರ್, ವೆಂಕಟೇಶ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.