ಮಲೇಬೆನ್ನೂರು, ಸೆ.2- ಜಿಗಳಿ ಗ್ರಾಮದ ಶ್ರೀ ಸಿದ್ಧಾರೂಢರ ಮಠದಲ್ಲಿ ಶ್ರಾವಣದ ಮಾಸದ ಅಂಗವಾಗಿ ಕಳೆದ ಒಂದು ತಿಂಗಳಿನಿಂದ ನಡೆದುಕೊಂಡ ಬಂದ ಶ್ರೀ ಸದ್ಗುರು ಸಿದ್ಧಾರೂಢರ ಪುರಾಣ ಸೋಮವಾರ ಮುಕ್ತಾಯಗೊಂಡಿತು.
ಗ್ರಾಮದ ಮುಖಂಡರಾದ ಜಿ.ಆನಂದಪ್ಪ, ಬಿ.ಎಂ.ದೇವೇಂದ್ರಪ್ಪ, ಗೌಡ್ರ ಬಸವರಾಜಪ್ಪ, ಎಂ.ಜಯಣ್ಣ, ಶ್ರೀಮತಿ ಕೆಂಚಮ್ಮ, ಪಿಎಸಿಎಸ್ ಸಿಇಓ ಎನ್.ಎನ್.ತಳವಾರ್, ನಿವೃತ್ತ ಶಿಕ್ಷಕರಾದ ಡಿ.ರವೀಂದ್ರಪ್ಪ, ಜಿ.ಆರ್.ನಾಗರಾಜ್, ಪತ್ರಕರ್ತ ಪ್ರಕಾಶ್, ಕುಂಬಳೂರು ವಾಸು ಸೇರಿದಂತೆ ಗ್ರಾಮದ ಅನೇಕರು ಪುರಾಣ ಮುಕ್ತಾಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪುರಾಣ ಓದಿದ ಕೆ.ಜಯಪ್ಪ ಅವರನ್ನು ಗೌರವಿಸಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.