ದಾವಣಗೆರೆ, ಸೆ.1- ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಒಬ್ಬ ಸ್ವಚ್ಛ ರಾಜಕಾರಣಿ 40 ವರ್ಷಗಳಿಂದ ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಯಾಗಿ ಜನರ ಸೇವೆ ಮಾಡಿದ್ದಾರೆ. ಅವರು ಬಡವರ ಪಾಲಿನ ಭಾಗ್ಯವಿದಾತ, ಹಸಿದವರಿಗೆ ಅನ್ನ ನೀಡಿದ ಅವರಿಗೆ ನಾಳೆ ಹೈ ಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನವರ ಪಾತ್ರ ರೂಪಿಸುವ ಯಾವುದೇ ವಾದವನ್ನು ವಕೀಲರು ನಿರೂಪಿಸಿಲ್ಲ. ಆದುದರಿಂದ ಸಿದ್ದರಾಮಯ್ಯ ಅವರು ಆರೋಪದಿಂದ ಮುಕ್ತರಾಗರಿದ್ದಾರೆ, ಬಿಜೆಪಿ ಜೆಡಿಎಸ್ ಮೋದಿ ಪಾಟಾಲಂ ಗೆ ಕಾಪಾಲ ಮೋಕ್ಷವಾಗಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.