ದಾವಣಗೆರೆ, ಸೆ. 1- ಇಲ್ಲಿಗೆ ಸಮೀಪದ ಕಕ್ಕರಗೊಳ್ಳ ಗ್ರಾಮದ ಪಟೇಲ್ ವೀರಪ್ಪ ಶಾಲೆಯಲ್ಲಿ ಸೆ. 1-ವಿಶ್ವ ಪತ್ರ ಬರವಣಿಗೆ ದಿನದ ಅಂಗವಾಗಿ ಮಕ್ಕಳು ಸಾಮೂಹಿಕವಾಗಿ ತಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆದು ಸಂಭ್ರಮಿಸಿದರು.
ಪತ್ರ ಬರವಣಿಗೆಯ ಪರಿಚಯವೇ ಕಳೆದು ಹೋದ ದಿನಗಳಲ್ಲಿ ಬೆಳೆದ ಈ ಪೀಳಿಗೆಯ ಮಕ್ಕಳಿಗೆ, ಅಂಚೆಯ ಇತಿಹಾಸದ ಮಹತ್ವ ಮತ್ತು ಹಿಂದಿನ ತಲೆಮಾರಿನ ಜನಗಳಿಗೆ ಅಂಚೆ ಇಲಾಖೆ ನೀಡುತ್ತಿದ್ದ ಆತ್ಮೀಯ ಸಂವಹನವನ್ನು ನೆನಪಿಸಿಕೊಡಲಾಯಿತು.