ಮಾಯಕೊಂಡ : ಈಶ್ವರೀಯ ವಿಶ್ವವಿದ್ಯಾಲಯದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ
ಮಾಯಕೊಂಡ, ಸೆ.1- ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಲಕ್ಷಾಂತರ ಯುವಕರನ್ನು ಪರಿವರ್ತಿಸಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಪ್ರಶಂಸಿಸಿದರು.
ಇಲ್ಲಿನ ಸಮುದಾಯ ಭವನದಲ್ಲಿ ಬ್ರಹ್ಮಾ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದುಶ್ಚಟಕ್ಕೆ ಬಲಿಯಾಗಿ ದಾರಿ ತಪ್ಪಿದವರೂ ಬ್ರಹ್ಮಾ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲ ಯದ ಮಾರ್ಗದರ್ಶನದಿಂದ ಸರಿದಾರಿಯಲ್ಲಿ ನಡೆ ಯುತ್ತಿದ್ದಾರೆ. ಈಶ್ವರೀಯ ವಿಶ್ವವಿದ್ಯಾಲಯ ಲಕ್ಷಾಂ ತರ ಯುವಕರನ್ನು ಪರಿವರ್ತಿಸಿದೆ. ಸಮಾಜದಲ್ಲಿ ಶಾಂತಿ ನಿರ್ಮಾಣಕ್ಕೆ ಎಲ್ಲರೂ ಸಹ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಈ ಸಂಸ್ಥೆ ಲಕ್ಷಾಂತರ ಶಾಖೆ ಹೊಂದಿದ್ದರೂ, ಮಹಿಳೆಯರು ಇದನ್ನು ನಿಭಾಯಿತ್ತಿದ್ದಾರೆ. ಜೈಲಿನಲ್ಲಿರುವ ಕೈದಿಗಳ ಮನಪರಿವರ್ತನೆ ಮಾಡಿದ್ದಾರೆ. ಗಾಂಧಿಯ
ಅಹಿಂಸಾತ್ಮಕ ಹೋರಾಟದಂತೆ ಬ್ರಹ್ಮಾ ಕುಮಾರೀಸ್ ಸಂಸ್ಥೆ ಶಾಂತಿಯಿಂದ ಜನ ಪರಿವರ್ತನೆ ಮಾಡುತ್ತಿದ್ದಾರೆ ಎಂದರು. ಮನುಷ್ಯರಲ್ಲಿ ಸಹೋದರ ಸಂಬಂಧಗಳು ಶಾಶ್ವತವಾಗಿ ಉಳಿಯಬೇಕು ಎಂದು ಬಸವಂತಪ್ಪ ಹೇಳಿದರು.
ಕಾಂಗ್ರೆಸ್ ಮುಖಂಡ ಬಿ.ಟಿ.ಹನುಮಂತಪ್ಪ, ಅಧ್ಯಾತ್ಮಕ್ಕೆ ಮಾನವರನ್ನು ದೇವರನ್ನಾಗಿಸುವ ಶಕ್ತಿಯಿದೆ. ಧ್ಯಾನದಿಂದ ಮನಶ್ಯಾಂತಿ ಪಡೆಯಬಹುದು. ರಕ್ಷಾ ಬಂಧನ ಆಧ್ಯಾತ್ಮಿಕ ಬಂಧನ. ಸಂಸ್ಕೃತಿ, ಸಂಸ್ಕಾರ ಕಲಿಯಲು ಈಶ್ವರೀಯ ವಿದ್ಯಾಲಯ ಸಹಕಾರಿ ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕರಾದ ಉಮಾದೇವಿ ಪ್ರಸ್ತಾವಿಕ ಮಾತನಾಡಿದರು. ರೇಖಾ ವಂದಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಶಿವಮ್ಮ ಮಲ್ಲಿಕಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ವಗ್ಗಪ್ಪರ ಮಲ್ಲಪ್ಪ, ಬಸವರಾಜಪ್ಪ, ಎಎಸ್ಐ ಹೇಮ್ಲಾ, ಮುಖಂಡರಾದ ಗೋಪಾಲ್, ಕಾಟೇಹಳ್ಳಿ ಹನುಮಂತಪ್ಪ, ಪೋಸ್ಟ್ ಚಂದ್ರಪ್ಪ, ಗಣೇಶಪ್ಪ, ಲೋಕಿಕೆರೆ ಶಂಕರಪ್ಪ, ಹಾಲೇಶಪ್ಪ, ರಂಗಣ್ಣ ಗಂಗನಕಟ್ಟೆ ಆನಂದಪ್ಪ ಮತ್ತಿತರರಿದ್ದರು.