ನಂದಿ ಸೌಹಾರ್ದ ಸಹಕಾರಿ ಸಂಘಕ್ಕೆ 42 ಲಕ್ಷ ರೂ. ನಿವ್ವಳ ಲಾಭ

ನಂದಿ ಸೌಹಾರ್ದ ಸಹಕಾರಿ ಸಂಘಕ್ಕೆ 42 ಲಕ್ಷ ರೂ. ನಿವ್ವಳ ಲಾಭ

ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಗೌಡ್ರ ಬಸವರಾಜಪ್ಪ ಸಂತಸ

ಮಲೇಬೆನ್ನೂರು, ಸೆ.1- ಇಲ್ಲಿನ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ಪಟ್ಟಣದ ನಿಟ್ಟೂರು ರಸ್ತೆಯಲ್ಲಿರುವ ವೀರಶೈವ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಜಿಗಳಿಯ ಗೌಡ್ರ ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ರಾಜರಾಜೇಶ್ವರಿ ಶಾಲೆಯ ರೇವತಿ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು.  ಸ್ವಾಗತ ಕೋರಿದ ಸಂಘದ ಮಾಜಿ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಜಿಗಳಿ ಇಂದೂಧರ್ ಅವರು,  ಸಾಲ ವಿತರಣೆ ಮತ್ತು ಸಾಲ ವಸೂಲಾತಿಯಲ್ಲಿ ನಮ್ಮ ಸಂಘವು ಪ್ರಥಮ ಶ್ರೇಣಿಯಲ್ಲಿದೆ ಎಂದರು.

2023-24ನೇ ಸಾಲಿನ ವಾರ್ಷಿಕ ವರತಿ ಮಂಡಿಸಿದ ಸಂಘದ ಅಧ್ಯಕ್ಷ ಜಿಗಳಿಯ ಗೌಡ್ರ ಬಸವರಾಜಪ್ಪ ಅವರು, ನಮ್ಮ ಸಂಘವು 3326 ಸದಸ್ಯರನ್ನು ಮತ್ತು 1,13,95,300 ರೂ. ಷೇರು ಬಂಡವಾಳವನ್ನು ಹೊಂದಿದೆ. 14,15,22,676 ರೂ. ಒಟ್ಟು ಠೇವಣಿ ಸಂಗ್ರಹಿಸಿದ್ದು, ಸದಸ್ಯರಿಗೆ 14,08,82,844 ರೂ. ಸಾಲ ಸೌಲಭ್ಯ ಕಲ್ಪಿಸಲಾಗಿದೆ. 20,83,58,243 ರೂ. ದುಡಿಯುವ ಬಂಡವಾಳ ಹೊಂದಿರುವ ನಮ್ಮ ಸಂಘವು 42,01,516 ರೂ. ನಿವ್ವಳ ಲಾಭ ಹೊಂದಿದೆ ಎಂದರು.

ಸಂಘದ ಕಚೇರಿ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಸಿಬ್ಬಂದಿಗಳಿಗೆ ವಸತಿ ಗೃಹ ಕಟ್ಟಿಸಲು ಈ ವರ್ಷದ ಡಿವಿಡೆಂಡ್ ಹಣ ವನ್ನು ನೀಡುವಂತೆ ಆಡಳಿತ ಮಂಡಳಿ ಮಾಡಿದ ಮನವಿಗೆ ಮಹಾಸಭೆ ಒಪ್ಪಿಗೆ ನೀಡಿತು.

ಸಂಘದ ಮಾಜಿ ಅಧ್ಯಕ್ಷ ಬಿ.ವೀರಯ್ಯ ಮಾತನಾಡಿ, ಸಂಘದ ಇಂಟ್ರನಲ್ ಆಡಿಟ್ ಮಾಡಿಸುವಂತೆ ಹೇಳಿದಾಗ ಸಂಘದ ನಿರ್ದೇಶಕ ಇಂದೂಧರ್ ಅವರು, ಇಂಟ್ರನಲ್ ಆಡಿಟ್ ಅವಶ್ಯಕತೆ ಇಲ್ಲ ಎಂದರು. ಆಗ ಸಂಘದ ಮಾಜಿ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಹಳ್ಳಿಹಾಳ್ ಹೆಚ್.ಟಿ.ಶಾಂತನಗೌಡರು, ಸಂಘದ ಹಿತದೃಷ್ಠಿ ಯಿಂದ ಇಂಟ್ರನಲ್ ಆಡಿಟ್ ಮಾಡಿಸೋಣ ಎಂದರು.

ಬಸಾಪುರದ ಲೋಕಯ್ಯ ಮಾತನಾಡಿ, ಯಾರೇ ಸದಸ್ಯರು ಪ್ರಶ್ನೆ ಕೇಳಲು 7 ದಿನ ಮುಂಚಿತವಾಗಿಯೇ ಲಿಖಿತವಾಗಿ ಅರ್ಜಿ ಕೊಡಬೇಕೆಂಬ ನಿಯಮ ಇದ್ದರೂ ಈ ರೀತಿ ದಿಢೀರ್ ಪ್ರಶ್ನೆ ಕೇಳುವುದು ಸರಿಯಲ್ಲ ಎಂದಾಗ ಬಿ.ವೀರಯ್ಯ ವಾಗ್ವಾದಕ್ಕೆ ಇಳಿದರು. ಆಗ ಆಡಳಿತ ಮಂಡಳಿಯವರು ಮಧ್ಯ ಪ್ರವೇ ಶಿಸಿ, ಇಬ್ಬರನ್ನೂ ಸಮಾಧಾನ ಪಡಿಸಿದರು.

ಅಕೌಂಟೆಂಟ್ ಎಂ.ಬಿ.ನಾಗನಗೌಡ ಅವರು, ವಾರ್ಷಿಕ ಸಭೆಯ ಸೂಚನಾ ಪತ್ರ ಓದಿದರು. ಇನ್ನೋರ್ವ ಅಕೌಂಟೆಂಟ್ ಶ್ರೀಮತಿ ಸುಮಾ ಅವರು, ಕಳೆದ ವರ್ಷದ ವಾರ್ಷಿಕ ಸಭೆಯ ನಡವಳಿಕೆಗಳನ್ನು ಓದಿ ದಾಖಲು ಮಾಡಿದರು.

ಪ್ರಭಾರ ಕಾರ್ಯದರ್ಶಿ ಹೆಚ್.ರುದ್ರಗೌಡ ಅವರು, ಲೆಕ್ಕ ಪರಿಶೋಧಕರು ಪರಿಶೋಧಿಸಲ್ಪಟ್ಟ ಆರ್ಥಿಕ ತಃಖ್ತೆ ಹಾಗೂ ಅನುಪಾಲನಾ ವರದಿಯನ್ನು ಓದಿ ಸಭೆಯಿಂದ ಅಂಗೀಕರಿಸಿದರು.

ನಿರ್ದೇಶಕ ಹೆಚ್.ಟಿ.ಶಾಂತನಗೌಡ್ರು,  ಲಾಭಾಂಶ ಹಂಚಿಕೆ ವಿಚಾರವನ್ನು ಮಂಡಿಸಿ ದರು.  ನಿರ್ದೇಶಕ ಸಂತೋಷ್ ಪಾಳ್ಯದ್ ಅವರು, 2024-25ನೇ ಸಾಲಿನ ಮುಂಗಡ ಪತ್ರ  ಓದಿದರು. ನಿರ್ದೇಶಕರಾದ ಶ್ರೀಮತಿ ಶೋಭಾ ಬಿ.ಜಿ.ಪಾಲಾಕ್ಷಪ್ಪ ಅವರು, ಲೆಕ್ಕ ಪರಿಶೋಧಕರ ನೇಮಕ ವಿಷಯ ಪ್ರಸ್ತಾಪಿಸಿ ದರು. ನಿರ್ದೇಶಕ ಕೊಕ್ಕನೂರಿನ ಬಿ.ಹೆಚ್.ರವಿ ಅವರು, ಮುಂದಿನ ವರ್ಷದ ಕಾರ್ಯ ಚಟುವಟಿಕೆಗಳನ್ನು ಸಭೆಗೆ ತಿಳಿಸಿದರು.

ಸಂಘದ ಉಪಾಧ್ಯಕ್ಷ ಕೊಕ್ಕನೂರಿನ ಕೆ.ಹೆಚ್.ಆಂಜನೇಯ ಪಾಟೀಲ್, ನಿರ್ದೇಶಕರಾದ ಹಳ್ಳಿಹಾಳ್ ಹೆಚ್.ಟಿ.ಪರಮೇಶ್ವರಪ್ಪ, ಎ.ಕೆ.ತಿಪ್ಪೇಶಪ್ಪ, ಹಿಂಡಸಘಟ್ಟಿಯ ಶ್ರೀಮತಿ ಸೌಭಾಗ್ಯ ಎಂ.ಬಿ.ಉದಯಕುಮಾರ್, ಮಲೇಬೆನ್ನೂರಿನ ಎ.ಆರೀಫ್ ಅಲಿ, ಕೊಕ್ಕನೂರಿನ ಆರ್.ನಾಗರಾಜ್, ಸಂಘದ ಕಾನೂನು ಸಲಹೆಗಾರ ನಂದಿತಾವರೆ ತಿಮ್ಮನಗೌಡ, ಇಂಜಿನಿಯರ್ ಜಿ.ಜಗನ್ನಾಥ್ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.

ಸುಭಾಶ್‌ಚಂದ್ರ ವಂದಿಸಿದರು.

error: Content is protected !!