ದಾವಣಗೆರೆ, ಆ. 29 – ಭಾವಸಾರ ವಿಷನ್ ಇಂಡಿಯಾ ಹಾಗೂ ಶ್ವಾಸಕೋಶ ತಜ್ಞ ಡಾ. ಅದೀಫ್ ಬಿ. ಅಂಬರ್‌ಕರ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮಹಾರಾಜ ಪೇಟೆಯ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಬರುವ ಸೆಪ್ಟೆಂಬರ್ 1ರ ಭಾನುವಾರ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ದೀರ್ಘಾ ವಧಿ ಕೆಮ್ಮು, ದಮ್ಮು, ಅಸ್ತಮಾ, ಅಲರ್ಜಿ, ಕ್ಷಯ ರೋಗ, ಕಫ, ಸಿಗರೇಟ್ ಹಾಗೂ ಧೂಳಿನಿಂದ ಉಂಟಾಗುವ ಉಸಿರಾಟದ ತೊಂದರೆ, ಗೊರಕೆಯ ಸಮಸ್ಯೆ ನಿವಾರಿಸುವ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ವಿವರಗಳಿಗೆ ಸರಳಾ ಅಮಟೆ (94483 64830), ರಮೇಶ್ ಬಾಬು ಗುಜ್ಜರ್ (99456 59498) ಇವರನ್ನು ಸಂಪರ್ಕಿಸಬಹುದಾಗಿದೆ.