ಮಕ್ಕಳ ಪ್ರತಿಭೆ ಗುರುತಿಸುವ ಶಿಕ್ಷಕರಲ್ಲೂ ಪ್ರತಿಭೆ ಇರಬೇಕು

ಮಕ್ಕಳ ಪ್ರತಿಭೆ ಗುರುತಿಸುವ ಶಿಕ್ಷಕರಲ್ಲೂ ಪ್ರತಿಭೆ ಇರಬೇಕು

ಮಲೇಬೆನ್ನೂರು : ಪ್ರತಿಭಾ ಕಾರಂಜಿ ಉದ್ಘಾಟನೆಯಲ್ಲಿ ಸಿಪಿಓ ತೀರ್ಥಪ್ಪ ಕಿವಿಮಾತು

ಮಲೇಬೆನ್ನೂರು, ಆ.29- ಪಟ್ಟಣದ ಭಾನು ಹೈಟೆಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಲೇಬೆನ್ನೂರು ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ತೀರ್ಥಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಜಾರಿಗೊಳಿಸಿದ್ದು, ಮಕ್ಕಳ ಪ್ರತಿಭೆ ಗುರುತಿಸುವ ಶಿಕ್ಷಕರಲ್ಲೂ ಪ್ರತಿಭೆ ಇರಬೇಕೆಂದರು. ಯಾವ ಮಕ್ಕಳ ಪ್ರತಿಭೆಗೂ ದಕ್ಕೆ ಆಗದಂತೆ ತೀರ್ಪುಗಾರರು ನೋಡಿಕೊಳ್ಳಬೇಕೆಂದು ಸಿಇಓ ತೀರ್ಥಪ್ಪ ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್‌ಪಿ ಕರಿಬಸಪ್ಪ ಬಸಲಿ ಅವರು, ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಹೊರ ಹಾಕುವ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲು ಶಿಕ್ಷಕರು, ಪೋಷಕರು ಪ್ರೋತ್ಸಾಹಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ನೀ.ವೀ.ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪಿ.ವಿ.ಮಾಲತೇಶ್ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸುವುದರ ಜೊತೆಗೆ ಸದಾ ಪ್ರೋತ್ಸಾಹ ನೀಡುವ ಕೆಲಸ ಆಗಬೇಕೆಂದರು.

ತಾಲ್ಲೂಕು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ.ಮಂಜಪ್ಪ, ತಾ. ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಸಾಕಮ್ಮ, ನಿರ್ದೇಶಕ ಬಿ.ಹೆಚ್.ಶಿವಕುಮಾರ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಶಿಕುಮಾರ್, ಹೆಚ್.ಗೋವಿಂದಪ್ಪ, ಅನುದಾನಿತ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಕೆ.ಭೀಮಪ್ಪ, ಎಸ್‌ಬಿಕೆಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸುರೇಶ್ ಮೂಲಿಮನಿ, ರಾಮಪ್ಪ ಸೋಮಣ್ಣನವರ್, ನೀ.ವೀ. ವಿದ್ಯಾಸಂಸ್ಥೆಯ ಚೈತ್ರಾ ಮಾಲತೇಶ್, ಜ್ಯೋತಿ ಭಾನುಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

ಭಾನು ಹೈ-ಟೆಕ್ ಶಾಲೆಯ ಪಕ್ಕೀರಪ್ಪ ಸ್ವಾಗತಿಸಿದರು. ಶಿಕ್ಷಕ ಶ್ರೀ ಹರಿ ನಿರೂಪಿಸಿದರು. ಶಿಕ್ಷಕ ಸಾಗರ್ ವಂದಿಸಿದರು.

ತೀರ್ಪುಗಾರರಾಗಿ ಸಲ್ಮಾ ಭಾನು, ರೇಣುಕಾ, ಅಕ್ಬರ್ ಕಾರ್ಯ ನಿರ್ವಹಿಸಿದರು.

error: Content is protected !!