ಹರಿಹರ, ಅ.29- ನಗರದ ಎಪಿಎಂಸಿ ಆವರಣದಲ್ಲಿರುವ ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೇ ಇರೋದರಿಂದ ಪ್ರತಿನಿತ್ಯ ಗುತ್ತೂರು, ದೀಟೂರು, ಸಾರಥಿ, ಕೊಂಡಜ್ಜಿ, ಕರಲಹಳ್ಳಿ, ಕುರಬರಹಳ್ಳಿ, ಗಂಗನಹರಸಿ ಭಾಗದಿಂದ ಬರುವಂತ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಇಟ್ಟಿಗೆ ಮರಳು ತುಂಬಿದ ಮಜ್ಡಾ ವಾಹನಗಳ ಮೂಲಕ ಕಾಲೇಜಿಗೆ ಹೋಗಿ ಬರುವಂತಾಗಿದೆ. ಎಪಿಎಂಸಿ ಮುಂಭಾಗದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಓಡಾಡುವ ಸರ್ಕಾರಿ ಬಸ್ ನಿಲ್ಲಿಸಿ, ಪ್ರತಿನಿತ್ಯ ಕಾಲೇಜಿಗೆ ಓಡಾಡುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಅವಕಾಶ ಮಾಡಿಕೊಟ್ಟರೆ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ.
January 13, 2025