ದಾವಣಗೆರೆ, ಆ.27- ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಮತದಾರರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು 2025 ರ ಜನವರಿ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ವೋಟರ್ ಹೆಲ್ಪ್ ಲೈನ್ ಆಪ್ ಅಥವಾ http;//voters.eci.gov.in/ ವೆಬ್ಸೈಟ್ ಮೂಲಕವೂ ನೋಂದಣಿ, ತಿದ್ದುಪಡಿ, ವರ್ಗಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ. ಸಂಪರ್ಕಿಸಬೇಕಾದ ತಹಶೀ ಲ್ದಾರರ ದೂರವಾಣಿ; ಜಗಳೂರು 9164687171, ದಾವಣಗೆರೆ 9108268759, ಹರಿಹರ 98809 94147, ಪಾಲಿಕೆ ಕಂದಾಯಾಧಿಕಾರಿ 990176 8584, ಪರಿಷತ್ ಕಾರ್ಯದರ್ಶಿ 7892012952, ಚನ್ನಗಿರಿ 9880383519, ಹೊನ್ನಾಳಿ 948054 5472 ಮೊಬೈಲ್ಗೆ ಕರೆ ಮಾಡಬಹುದಾಗಿದೆ.
ಮತದಾರರ ಪಟ್ಟಿಯ ಕರಡು ಪ್ರತಿಯನ್ನು 2024 ರ ಅಕ್ಟೋಬರ್ 29 ರಂದು ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ 2024 ರ ನವೆಂಬರ್ 28 ರೊಳಗಾಗಿ ಸಲ್ಲಿಸಬಹುದಾಗಿದೆ. 2025 ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.