ರಾಯರ ಆರಾಧನೆಯಲ್ಲಿ ನವಶಕ್ತಿ ನಮನ ನೃತ್ಯರೂಪಕ

ರಾಯರ ಆರಾಧನೆಯಲ್ಲಿ ನವಶಕ್ತಿ ನಮನ ನೃತ್ಯರೂಪಕ

ದಾವಣಗೆರೆ, ಆ. 27 – ಇಲ್ಲಿನ ಕೆ.ಬಿ. ಬಡಾವಣೆಯ ರಾಯರ ಮಠದಲ್ಲಿ ಕಳೆದ ವಾರ ನಡೆದ ರಾಯರ 353ನೇ ಆರಾಧನಾ ಮಹೋತ್ಸವದಲ್ಲಿ ನವದುರ್ಗೆಯರ ವೈಶಿಷ್ಟ್ಯತೆಯ ಹಾಗೂ ಅವರ ಹುಟ್ಟಿನ ಕಾರಣವನ್ನು ಕುರಿತು ನವಶಕ್ತಿ ನಮನ ಎಂಬ ನೃತ್ಯರೂಪಕ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ದಸರಾ ಹಬ್ಬದಲ್ಲಿ ಒಂಬತ್ತು ದಿನಗಳಲ್ಲಿ 9 ದುರ್ಗೆಯ ರನ್ನು ಪೂಜಿಸುತ್ತೇವೆ. ಪ್ರತಿದಿನದ ದುರ್ಗೆಯರು ಅವರು ಏಕೆ ಈ ಅವತಾರವನ್ನು ತಾಳಿದರು ಮತ್ತು ಅವರ ವಿಶೇಷತೆ ಏನು, ಅವರು ಯಾವ ಬಣ್ಣವನ್ನು ಧರಿಸಿರು ತ್ತಾರೆ. ಇದರ ಬಗ್ಗೆ ಹಾಗೂ  ಆ ದುರ್ಗೆಯ ಅವತಾರವನ್ನು ತಾಳಲು ಉದ್ದೇಶವೇನೆಂದು ಪ್ರತಿ ದುರ್ಗೆಯರ ನೃತ್ಯದಲ್ಲಿ ಅಭಿನಯದ ಮೂಲಕ  ವಿವರಿಸಲಾಗಿದೆ.

ನಗರದ ನಮನ ಅಕಾಡೆಮಿಯ ಗುರು ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಮತ್ತು ಶಿಷ್ಯ ವೃಂದದವರು ಈ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!