ರಾಣೇಬೆನ್ನೂರು ತಾ|| ಕಸಾಪ ಭವನ ನಿರ್ಮಾಣ ರಾಜ್ಯದಲ್ಲೇ ಪ್ರಥಮ

ರಾಣೇಬೆನ್ನೂರು ತಾ|| ಕಸಾಪ ಭವನ ನಿರ್ಮಾಣ ರಾಜ್ಯದಲ್ಲೇ ಪ್ರಥಮ

ರಾಣೇಬೆನ್ನೂರು, ಆ.27- ರಾಜ್ಯದಲ್ಲೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಿಸಿದ ಕೀರ್ತಿ ತಾಲ್ಲೂಕಿನ ಸಾಹಿತ್ಯಾಸಕ್ತರಿಗೆ ಸಲ್ಲುತ್ತದೆ ಎಂದು `ವರ್ತಕ ರತ್ನ ಪ್ರಶಸ್ತಿ ಪುರಸ್ಕೃತ’ ಉದ್ಯಮಿ ಮಲ್ಲೇಶ್‌ ಹೇಳಿದರು.

ನಗರದ ಮೆಡ್ಲೇರಿ ರಸ್ತೆಯ ಸಾಹಿತ್ಯ ಭವನದಲ್ಲಿ ಸೋಮವಾರ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಭವನ ನಿರ್ಮಾಣಕ್ಕಾಗಿ ಎಲ್ಲರೊಡಗೂಡಿ ಶ್ರಮಿಸಿದ ಅಂದಿನ ಅಧ್ಯಕ್ಷ ಹಾಗೂ ಉದ್ಯಮಿ ವಾಸಣ್ಣ ಕುಸಗೂರ ಅವರ ಪರಿಶ್ರಮ ಅಪಾರ ಎಂದು ಶ್ಲ್ಯಾಘಿಸಿದರು.

ನಗರವು ವಾಣಿಜ್ಯೋದ್ಯಮದಲ್ಲಿ ಬೆಳವಣಿಗೆ ಕಂಡಂತೆ ಸಾಹಿತಿಗಳ ಬೆಳೆವಣಿಗೆಗೂ ಸಹಕಾರ ನೀಡುತ್ತಾ ಬಂದಿದೆ. ಹಾಗಾಗಿ ನಗರದಲ್ಲಿ ಈ ವರೆಗೂ
ನಡೆದ ಸಮ್ಮೇಳನಗಳು, ಸಾಹಿತ್ಯ ಕಾರ್ಯಕ್ರಮಗಳು ಯಶಸ್ಸು ಕಂಡಿವೆ. ಈ ಯಶಸ್ಸಿಗೆ ತಾಲ್ಲೂಕಿನ ಎಲ್ಲ ಪ್ರತಿನಿಧಿಗಳ ಸಹಕಾರ ಸಹ ದೊರಕಿದೆ ಎಂದು ಅರಕೇರಿ ಹೇಳಿದರು.

ನಿಕಟಪೂರ್ವ ಅಧ್ಯಕ್ಷ ವೀರೇಶ್‌ ಜಂಬಗಿ ಅವರಿಂದ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಪ್ರಭಾಕರ ಶಿಗ್ಲಿ ಮಾತನಾಡಿ, ಎಲ್ಲರ ಸಹಕಾರದಿಂದ ಹೆಚ್ಚೆಚ್ಚು ಸಾಹಿತ್ಯ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.

ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಪ್ರಭಾವತಿ ತಿಳವಳ್ಳಿ, ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಜಿಲ್ಲಾಧ್ಯಕ್ಷ ಲಿಂಗಯ್ಯ ಮತ್ತಿತರರು ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕಿ ಮೈಲಾರ ಸಾವಿತ್ರಿ ಆಶಯ ನುಡಿಗಳನ್ನಾಡಿದರು.

ವರ್ತಕ ಸಂಘದ ಮಾಜಿ ಅಧ್ಯಕ್ಷ ರಾಜಣ್ಣ ಮೋಟಗಿ, ಧಾರವಾಡ ವಿವಿ
ಸದಸ್ಯ ನಾಮದೇವ ಚಿಕ್ಕಣ್ಣನವರ,
ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳಿದ್ದರು.

error: Content is protected !!