ಹೊನ್ನಾಳಿ, ಆ. 26- ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಹೊನ್ನಾಳಿ ತಾಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ನಡೆದಿದೆ. 64 ವರ್ಷದ ರೈತ ಧರಿಯಪ್ಪ ಎಂಬ ವ್ಯಕ್ತಿಯು ಆ. 18 ರಂದು ವಿಷ ಕುಡಿದಿದ್ದು, ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರೈತ ಸಾವನ್ನಪ್ಪಿದ್ದಾರೆ. ಮೃತ ರೈತ ತನ್ನ 5 ಎಕರೆ ಜಮೀನಿನಲ್ಲಿ ಭತ್ತ, ಮೆಕ್ಕೆಜೋಳ ಬೆಳೆದಿದ್ದರು. ಎಸ್. ಬಿ.ಐ. ನಲ್ಲಿ 2,80,000, ಐ.ಡಿ.ಎಫ್.ಸಿ. ಬ್ಯಾಂಕ್ ಲ್ಲಿ 5 ಲಕ್ಷ ಸಾಲ ಮಾಡಿದ್ದು, ಖಾಸಗಿಯವರಿಂದ 2ಲಕ್ಷ ಸಾಲ ಸೇರಿದಂತೆ ಒಟ್ಟು 10 ಲಕ್ಷ ರೂ.ಸಾಲ ಮಾಡಿದ್ದರು ಎನ್ನಲಾಗಿದೆ. ಹೊನ್ನಾಳಿ ಪೊಲೀಸ್ ಇನ್ಸಪೆಕ್ಟರ್ ಎಚ್.ಸುನಿಲ್ ಕುಮಾರ್ ಬಳ್ಳೇಶ್ವರ ಗ್ರಾಮದ ಶ್ರೀಪಾಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
December 22, 2024