ಪ್ರತಿಭಾ ಕಾರಂಜಿ : ಮಹಮ್ಮದ್, ಕೃತಿಕಾ ಕಮ್ಮಾರ್‌ ಪ್ರಥಮ

ಪ್ರತಿಭಾ ಕಾರಂಜಿ : ಮಹಮ್ಮದ್, ಕೃತಿಕಾ ಕಮ್ಮಾರ್‌ ಪ್ರಥಮ

ರಾಣೇಬೆನ್ನೂರು, ಆ. 26 – ನಗರದಲ್ಲಿ ಈಚೆಗೆ ನಡೆದ ರಾಣೇಬೆನ್ನೂರು ನಂ-1 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ `ಕಲೋತ್ಸವ ಕಾರ್ಯಕ್ರಮ’ದಲ್ಲಿ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಛಧ್ಮವೇಶ ಸ್ಪರ್ಧೆಯಲ್ಲಿ ಮಹಮ್ಮದ್ ರಾಹಿಲ್ (ಪ್ರಥಮ), ಕನ್ನಡ ಕಂಠಪಾಠದಲ್ಲಿ ಕೃತಿಕಾ ಕಮ್ಮಾರ (ಪ್ರಥಮ), ಹಿಂದಿ ಕಂಠಪಾಠದಲ್ಲಿ  ಸಿ.ಎಸ್‌. ಕುಶಾಲ್ (ದ್ವಿತೀಯ), ಇಂಗ್ಲಿಷ್ ಕಂಠಪಾಠದಲ್ಲಿ ಅಂಕಿತಾ ಬಂಡಿ (ದ್ವಿತೀಯ), ಆಶುಭಾಷಣ ಸ್ಫರ್ಧೆಯಲ್ಲಿ ಖುಷಿ ಹಾಲಿವಾಣ (ದ್ವಿತೀಯ), ಅಭಿನಯ ಗೀತೆ ಸ್ಪರ್ಧೆಯಲ್ಲಿ ಸನ್ನಿಧಿ ಗಾರೆ (ದ್ವಿತೀಯ) ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

error: Content is protected !!