ಉತ್ತಮ ಜೀವನಕ್ಕೆ ವಚನ ಸಾಹಿತ್ಯ ಸಹಕಾರಿ

ಉತ್ತಮ ಜೀವನಕ್ಕೆ ವಚನ ಸಾಹಿತ್ಯ ಸಹಕಾರಿ

ತಾಲ್ಲೂಕು ಕಸಾಪ ಕಾರ್ಯಕ್ರಮದಲ್ಲಿ ಶಸಾಪ ಕಾರ್ಯದರ್ಶಿ ಭರಮಣ್ಣ ಮೈಸೂರು

ದಾವಣಗೆರೆ, ಆ. 25 – ತಾಲ್ಲೂಕು ಕಸಾಪ, ಎ.ಆರ್.ಜಿ. ಪದವಿಪೂರ್ವ ಕಾಲೇಜು, ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗ ದಲ್ಲಿ ಕಾಲೇಜಿನ ಆವರಣದಲ್ಲಿ ಈಚೆಗೆ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗ ವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

`ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ವಚನ ಸಾಹಿತ್ಯದ ಪಾತ್ರ’ ವಿಷಯ ಕುರಿತು ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಭರಮಣ್ಣ ಮೈಸೂರು ಅವರು, ಉತ್ತಮ ಜೀವನ ರೂಪಿಸಿಕೊಳ್ಳಲು ವಚನ ಸಾಹಿತ್ಯವು ಸಹಕಾರಿಯಾಗಿದೆ. 12ನೇ ಶತಮಾನದಲ್ಲೇ ಶರಣರು ವಚನಗಳ ಮೂಲಕ ಸಮಾಜವನ್ನು ತಿದ್ದಿದ್ದಾರೆ ಎಂದು ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪ ನ್ಯಾಸಕ ಬಸವರಾಜ್ ಕಲ್ಕಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಜಯಶೀಲ ನಿರೂಪಿಸಿದರು. 

ತಾಲ್ಲೂಕು ಕಸಾಪ ನಿರ್ದೇಶಕ ಷಡಾಕ್ಷರಪ್ಪ ಎಂ. ಬೇತೂರು ವಂದಿಸಿದರು. ರಕ್ಷಿತಾ ಪ್ರಾರ್ಥಿಸಿದರು.

ಎ.ಆರ್.ಜಿ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಬೊಮ್ಮಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪರಮೇಶ್ವರಪ್ಪ, ಉಪನ್ಯಾಸಕ ವೈ.ಜಿ. ಪ್ರದೀಪ್ ಹಾಗೂ ಡಿ.ಬಿ. ಬಸವರಾಜ್ ಉಪಸ್ಥಿತರಿದ್ದರು.

error: Content is protected !!