ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಕಡೇ ಸೋಮವಾರ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 11 ಗಂಟೆಗೆ ಶ್ರೀ ಗೋಣಿ ಬಸವೇಶ್ವರ ಹಾಗೂ ನಾಗದೇವತಾ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯುವುದು. ನಂತರ 11.30 ಕ್ಕೆ ಮಹಾ ಪ್ರಸಾದ ಸೇವೆ ಜರುಗುವುದು. ಹರಿಹರ ತಾ. ದೀಟೂರು ಗ್ರಾಮದ ನಿವೃತ್ತ ಉಪ ಕುಲಪತಿ ಡಾ. ಹೆಚ್. ಮಹೇಶ್ವರಪ್ಪ, ಮಕ್ಕಳು ಹಾಗೂ ಸಹೋದರರು ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದಾರೆ. ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ ಹಾಗೂ ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿ ಆಶ್ರಯ ದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
January 18, 2025