ಹರಿಹರದಲ್ಲಿ ವಿಜೃಂಭಣೆಯ ರಾಯರ ಆರಾಧನಾ ಮಹೋತ್ಸವದ ರಥೋತ್ಸವ

ಹರಿಹರದಲ್ಲಿ ವಿಜೃಂಭಣೆಯ ರಾಯರ  ಆರಾಧನಾ ಮಹೋತ್ಸವದ ರಥೋತ್ಸವ

ಹರಿಹರ, ಆ.22- ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ರಾಯರ 356ನೇ ಆರಾಧನಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.

ಗುರು ರಾಯರಿಗೆ ಬೆಳಗ್ಗೆ ಯಿಂದಲೇ ವಿಶೇಷ ಪೂಜಾಲಂ ಕಾರ ನಡೆದವು ಮತ್ತು ಸತ್ಯನಾರಾ ಯಣ ಪೂಜೆ ಮಾಡಲಾಯಿತು.

ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ರಾಯರ ನಾಮ ಸ್ಮರಣೆಯಲ್ಲಿ ಮೊಳಗಿದ್ದ ಭಕ್ತರು, ಜಯ ಘೋಷಗಳನ್ನು ಕೂಗುತ್ತಾ ರಥಕ್ಕೆ ಉತ್ತುತ್ತಿ, ಕಲ್ಲುಸಕ್ಕರೆ ಮತ್ತು ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ದೇವಸ್ಥಾನದ ಆವರಣದಲ್ಲೇ ಜರುಗಿದ ರಥೋತ್ಸವದ ರಾಜ ನಡಿಗೆಯಲ್ಲಿ ಡೊಳ್ಳು, ಸಮಾಳ, ಭಜನೆ ಹಾಗೂ ಕೋಲಾಟವು ರಥೋತ್ಸವದ ಸೋಬಗನ್ನು ಇಮ್ಮಡಿಗೊಳಿಸಿದವು.

ಪತ್ರಕರ್ತರಾದ ಶಾಂಭವಿ ನಾಗರಾಜ್, ಶೇಖರಗೌಡ ಪಾಟೀಲ್, ಎಂ. ಚಿದಾನಂದ ಕಂಚಿಕೇರಿ, ಹೆಚ್.ಸಿ. ಕೀರ್ತಿ ಕುಮಾರ್, ಬಿ.ಎಂ. ಚಂದ್ರಶೇಖರ್, ಅಣ್ಣಪ್ಪ ಲಕ್ಕಶೆಟ್ಟಿಹಳ್ಳಿ ಅವರುಗಳನ್ನು ದೇವಸ್ಥಾನದ ಸಮಿತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. 

ದೇವಸ್ಥಾನದ ಪ್ರಧಾನ ಅರ್ಚಕ ವರಹಾಚಾರ್, ಸಮಿತಿಯ ಅಧ್ಯಕ್ಷ ಎ.ಬಿ. ಬಸವರಾಜ್, ಕಾರ್ಯದರ್ಶಿ ಸುಕುಮಾರ್, ಖಜಾಂಚಿ ಎಸ್. ರಂಗನಾಥ್, ನಿರ್ದೇಶಕ ಶ್ರೀಧರ್ ಶೆಟ್ಟಿ, ಮಂಜುನಾಥ್, ಪವನ್ ಆಚಾರ್, ಬಿಜೆಪಿಯ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಹೆಚ್.ಎಸ್ ರಾಘವೇಂದ್ರ, ಶ್ರೀನಿವಾಸ್ ಚಂದಾಪೂರ್, ಎ.ಬಿ. ವಿಶ್ವನಾಥ್, ಎ.ಬಿ. ಮಂಜುನಾಥ್, ಹಿಂದೂ ಜಾಗರಣ ವೇದಿಕೆಯ ದಿನೇಶ್, ಶಿವು, ಚಂದ್ರಕಾಂತ, ಡಾ. ಸಿಂದಗಿ, ಅಮರಾವತಿ ನಾಗರಾಜ್, ಮುನೀಂದ್ರ ಮತ್ತು ಭಕ್ತರು ರಥೋತ್ಸವದಲ್ಲಿದ್ದರು.

error: Content is protected !!