ದಾವಣಗೆರೆ, ಆ. 22 – ನಿನ್ನೆ ನಿಧನರಾದ ಸಿಟಿ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಎನ್. ಜೆ. ಗುರುಸಿದ್ದಯ್ಯ ಅವರಿಗೆ ಬ್ಯಾಂಕಿನ ಉಪಾಧ್ಯಕ್ಷ ಎನ್. ಎಂ. ನಿರಂಜನ್ ನಿಶಾನಿಮಠ್ ಅವರ ಅಧ್ಯಕ್ಷತೆಯಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗುರುಸಿದ್ಧಯ್ಯ ಅವರ ವ್ಯಕ್ತಿತ್ವ ಮತ್ತು ಸಾಮಾಜಿಕ ಸೇವೆಯನ್ನು ಮೆಲುಕು ಹಾಕಲಾಯಿತು.
ಸಭೆಯಲ್ಲಿ ಹಿರಿಯ ನಿರ್ದೇಶಕ ಕೆ. ಎಸ್. ಮಹೇಶ್ವರಪ್ಪ ಬಿ. ಹೆಚ್. ಪರಶುರಾಮಪ್ಪ, ಎನ್.ವಿ. ಬಂಡಿವಾಡ, ಡಾ. ಎಂ. ಸೋಮಶೇಖರಪ್ಪ, ಎಂ. ಎಸ್. ಸುಮಂತ್, ಸಿಬ್ಬಂದಿಯ ಪರವಾಗಿ ಶ್ರೀಮತಿ ಗೀತಾರಾಣಿ ಮತ್ತು ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರು ಮಾತನಾಡಿದರು.