ದಾವಣಗೆರೆ ತಾಲ್ಲೂಕು ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಇಂದು ಮಾರಮ್ಮ ದೇವಿ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಮತ್ತು ಚಂಡಿಕಾ ಹೋಮ ಕಾರ್ಯಕ್ರಮವು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಚಿತ್ರದುರ್ಗ ಯಾದವ ಗೊಲ್ಲಗಿರಿ ಸುಕ್ಷೇತ್ರದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಅಮೃತ ಹಸ್ತದಿಂದ ಇಂದು ನೆರವೇರಲಿದೆ.
ಬೆಳಿಗ್ಗೆ 8.20ಕ್ಕೆ ಪ್ರತಿಷ್ಠಾಂಗ ಹೋಮ, ನಂತರ 10.20ಕ್ಕೆ ಶ್ರೀದೇವಿಯ ಪ್ರಾಣ ಪ್ರತಿಷ್ಟಾಪನೆ ನಡೆಯಲಿದೆ. ಮಧ್ಯಾಹ್ನ 12.20ಕ್ಕೆ ಪೂರ್ಣಾಹುತಿ, ಕಲಶಾಭಿಷೇಕ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಶ್ರೀ ಕೃಷ್ಣ ಕಲಾ ಮಂಡಳಿಯಿಂದ ಭಜನೆ, ಕೋಲಾಟ ಹಮ್ಮಿಕೊಳ್ಳಲಾಗಿದೆ.