ಮಲೇಬೆನ್ನೂರು, ಆ. 22 – ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿದ ಉಚಿತ ಶೂ ಮತ್ತು ಸಾಕ್ಸ್ಗಳನ್ನು ಎಸ್ಡಿಎಂಸಿ ಪದಾಧಿಕಾರಿಗಳು ವಿತರಣೆ ಮಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಗಂಗಾಧರ ಚಾರಿ, ಉಪಾಧ್ಯಕ್ಷೆ ಮಂಜುಳಾ ಮಾಲತೇಶ್, ಸದಸ್ಯರಾದ ಸುನೀತಾ ನಾಗರಾಜ್, ಬಿ ಪ್ರಭಾಕರ್, ಎಲ್ ಕೆ ಜಿ ಹಾಗೂ ಯು ಕೆ ಜಿ ಅಧ್ಯಕ್ಷ ಕೆ ಎಸ್ ಮಾಲತೇಶ್, ಶಾಲಾ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಲೋಕೇಶ್, ಗುಡ್ಡಪ್ಪ, ಶ್ರೀನಿವಾಸ್ ರೆಡ್ಡಿ, ಜಯಶ್ರೀ, ಶಿಲ್ಪಾ ಮತ್ತಿತರರು ಈ ವೇಳೆ ಹಾಜರಿದ್ದರು.
January 11, 2025