ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಾವಣಗೆರೆ ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ನಡೆಯುತ್ತಿರುವ `ಸಮಾಜ ಕಾರ್ಯ ಗ್ರಾಮೀಣ ಶಿಬಿರ’ದ ಸಮಾರೋಪ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಮುಖ್ಯ ಶಿಕ್ಷಕಿ ಜಿ.ಬಿ. ನಿರ್ಮಲ ಅಧ್ಯಕ್ಷತೆ ವಹಿಸುವರು. ದಾವಣಗೆರೆ ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಕೆ. ರಮೇಶ ಸಮಾರೋಪ ಭಾಷಣ ಮಾಡಲಿದ್ದಾರೆ. ಪ್ರಾಧ್ಯಾಪಕ ಡಾ. ಬಿ.ಪಿ. ಶಿವಲಿಂಗಪ್ಪ ವರದಿ ಮಂಡಿಸುವರು. ಸಿಂಡಿಕೇಟ್ ಸದಸ್ಯೆ ಶಾರದ ಪಾಟೀಲ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹೇಮಾವತಿ ರವಿಕುಮಾರ್, ಪ್ರೊ. ಎಸ್. ಸುಚಿತ್ರ, ಡಾ.ಎಂ.ಯು. ಲೋಕೇಶ್, ಸರಸ್ವತಿ ಸಂತೋಷ್ ಕುಮಾರ್, ಇಸ್ರತ್ ಜಹಾನ್, ಹೆಚ್.ಪಿ. ಹುಚ್ಚೆಂಗಪ್ಪ, ಡಾ.ಬಿ.ಎಸ್. ಪ್ರದೀಪ್, ಡಾ.ಪಟವರ್ಧನ್ ರಾಠೋಡ್, ಡಾ. ಕೆ. ತಿಪ್ಪೇಶ್, ಕೆ.ಎಸ್. ದಿನೇಶ್, ಎಸ್.ಟಿ. ಮಂಜುನಾಥ ಭಾಗವಹಿಸಲಿದ್ದಾರೆ.