ನಗರದಲ್ಲಿಂದು ಚೌಡೇಶ್ವರಿ ದೇವಿಗೆ ಪೂಜೆ

ಪಿ.ಜೆ. ಬಡಾವಣೆ 6 ನೇ ಕ್ರಾಸ್, 6 ಮೇನ್ ಸೇಂಟ್ ಪಾಲ್ಸ್ ಹತ್ತಿರವಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಚೌಡೇಶ್ವರಿ ದೇವಿ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 7 ಕ್ಕೆ ಶ್ರೀ ಚೌಡೇಶ್ವರಿ ದೇವಿಗೆ ಪಂಚಾಮೃತಾಭಿಷೇಕ, ರುದ್ರಭಿಷೇಕ ನಂತರ ಅಮ್ಮನವರ ವಿಶೇಷ ಅಲಂಕಾರ ಪೂಜೆ ಇರುತ್ತದೆ. ಮಂಗಳಾರತಿ ನಂತರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. 

error: Content is protected !!