ಕ್ರೀಡಾಪಟುಗಳಿಗೆ ಜರ್ಸಿ ವಿತರಣೆ

ಕ್ರೀಡಾಪಟುಗಳಿಗೆ ಜರ್ಸಿ ವಿತರಣೆ

ಮಲೇಬೆನ್ನೂರು, ಆ. 21 – ಬೆಳ್ಳೂಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅನುದಾನಿತ  ಹಿರಿಯ ಪ್ರಾಥಮಿಕ ಶಾಲೆಯ ಖೋ ಖೋ ಆಟಗಾರರಿಗೆ ಜರ್ಸಿ ಸಮವಸ್ತ್ರವನ್ನು ಗ್ರಾಮದ ಕಬಡ್ಡಿ ಆಟಗಾರರಾದ ಮಧು, ಹರೀಶ್, ಪ್ರಶಾಂತ್ (ಪಚ್ಚಿ) ಅವರು ಉಚಿತವಾಗಿ ನೀಡಿದರು. 

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವಿ.ಬಿ. ತಿಪ್ಪೇಶ್, ದೈಹಿಕ ಶಿಕ್ಷಕರಾದ ಶಶಿಕಲಾ ಪೂಜಾರ್, ಲಕ್ಷ್ಮಪ್ಪ ಪವಾಡಿ, ರವೀಂದ್ರನಾಥ್, ಇಂದ್ರಮ್ಮ, ಶಿಕ್ಷಕ ಮಂಜುನಾಥ್ ಕಡೆಮನಿ ಇದ್ದರು.

error: Content is protected !!