ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಆರಾಧನಾ ಮಹೋತ್ಸವವು ಇಂದು ಮತ್ತು ನಾಳೆ ನಡೆಯಲಿದೆ. ಇಂದು ಮಧ್ಯಾರಾಧನೆ ಪ್ರಯುಕ್ತ ಸಂಜೆ 6 ರಿಂದ ರಥೋತ್ಸವ, ಅಷ್ಟಾವಧಾನ, 7 ರಿಂದ ಸಂಜೀವ ಜೋಶಿ ಮತ್ತು ತಂಡದವರಿಂದ ಹರಿದಾಸವಾಣಿ ಆಯೋಜಿಸಲಾಗಿದೆ.
ನಾಳೆ ಗುರುವಾರ ಉತ್ತರಾರಾಧನೆ ಪ್ರಯುಕ್ತ ಬೆಳಿಗ್ಗೆ 10.30 ರಿಂದ ಶ್ರೀ ಮಂತ್ರಾಲಯ ಪ್ರಭುಗಳು ರಚಿಸಿರುವ ಶ್ರೀ ಮನ್ಯಾಯ ಸುಧಾ ಪರಿಮಳ ಗ್ರಂಥದೊಂದಿಗೆ ಶ್ರೀ ಗುರು ಸಾರ್ವಭೌಮರ ಮಹಾರಥೋತ್ಸವ ಜರುಗಲಿದೆ. ನಂತರ ಸಂಜೆ 6ಕ್ಕೆ ಶುಭದಾ ಮತ್ತು ತಂಡದ 30 ಜನರಿಂದ ವೀಣಾ ವಾದನ ನಡೆಯಲಿದೆ ಎಂದು ಶ್ರೀ ಗುರುರಾಜ ಸೇವಾ ಸಂಘದ ಪ್ರಕಟಣೆ ತಿಳಿಸಿದೆ.