ಪ್ರಾಚೀನ ಪಾರಂಪರಿಕ ಗುರು-ಶಿಷ್ಯ ಪರಂಪರೆಯ ತರಬೇತಿಯ ಉದ್ಘಾಟನಾ ಸಮಾರಂಭ
ದಾವಣಗೆರೆ, ಆ. 20- ಪಾರಂಪರಿಕ ವೈದ್ಯಕ್ಕೆ ಪ್ರಕೃತಿಯೇ ಗುರು ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತರುದ್ರೇಶ್ವರ ಶ್ರೀಗಳು ಹೇಳಿದರು.
ಪಾರಂಪರಿಕ ವೈದ್ಯ ಪರಿಷತ್, ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಪಾರಂಪರಿಕ ವೈದ್ಯ ಗುರುಕುಲ ಇವರ ಸಹಯೋಗದಲ್ಲಿ ನಗರದ ಓಂ ವೆಲ್‌ನೆಸ್ ಸೆಂಟರ್‌ನಲ್ಲಿ ಮೊನ್ನೆ ಏರ್ಪಡಿಸಿದ್ದ ಪ್ರಾಚೀನ ಪಾರಂಪರಿಕ ಗುರು-ಶಿಷ್ಯ ಪರಂಪರೆಯ ತರಬೇತಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಪಶು ಪಕ್ಷಿಗಳಿಗೆ ಏನಾದರೂ ಅಜೀರ್ಣ ಆದರೆ, ಲಾಂಟನ್ ಸೊಪ್ಪು ತಿಂದು ವಾಂತಿ ಮಾಡಿಕೊಂಡು ಆರೋಗ್ಯ ಸರಿಪಡಿಸಿ ಕೊಳ್ಳುತ್ತವೆ. ಇವುಗಳಿಗೆ ಹೇಳಿಕೊಟ್ಟು ಗುರು ಯಾರು? ಇವುಗಳಿ ಗೆಲ್ಲಾ ಪ್ರಕೃತಿಯೇ ಗುರು ಎಂದರು. ಅದೇ ರೀತಿ ಪಾರಂಪರಿಕ ವೈದ್ಯರು ಪ್ರಕೃತಿಯಲ್ಲಿನ ಸಸ್ಯಗಳನ್ನು ಗುರುತಿಸಿ, ರೋಗ ಗುಣಪಡಿ ಸುವುದನ್ನು ಕಂಡುಕೊಂಡಿದ್ದಾರೆ. ಇಂತಹ ಪರಂಪರೆಯ ವೈದ್ಯ ವೃತ್ತಿಯನ್ನು ತರಬೇತಿಯ ಮೂಲಕ ಮಾಹಿತಿ ಪಡೆದುಕೊಂಡು ತಮ್ಮ ಜೀವನದಲ್ಲಿ ಉಪಯೋಗಿಸಿಕೊಳ್ಳಿ ಎಂದರು.
ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಅಧ್ಯಕ್ಷ ಡಾ. ಜಿ. ಮಹಾದೇವಪ್ಪ ಮೂಳೆ ಮುರಿತ ಚಿಕಿತ್ಸೆ ಬಗ್ಗೆ ಮಾತನಾಡಿದರು.
ಪಾರಂಪರಿಕ ವೈದ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ವೈದ್ಯ ನೇರ್ಲಿಗೆ ಗುರುಸಿದ್ದಪ್ಪ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮನೆಯೇ ಮೊದಲ ಪಾಠಶಾಲೆ ಹೇಗೋ ಹಾಗೆ ಮನೆ ಮೊದಲ ವೈದ್ಯ ಶಾಲೆಯಾಗಬೇಕೆಂಬುದೇ ವೈದ್ಯ ಪರಿಷತ್ ಉದ್ದೇಶವೆಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ವೈದ್ಯ ಪರಿಷತ್ ಅಧ್ಯಕ್ಷರಾದ ಶಿವಲಿಂಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯ ಪರಿಷತ್ ಉಪಾಧ್ಯಕ್ಷರಾದ ಡಾ. ಕೆ.ಪಿ. ಲತಾ, ವೈದ್ಯ ಪರಿಷತ್ ಕಾರ್ಯದರ್ಶಿ ಮಮತಾ ನಾಗರಾಜ್, ಸಹ ಕಾರ್ಯದರ್ಶಿ ರೇಖಾ, ಓಂ ವೆಲ್‌ನೆಸ್ ಸೆಂಟರ್‌ನ ಸುನಿಲ್, ಹಿರಿಯ ವೈದ್ಯ ಬಿ.ಎಂ. ಶಿವಮೂರ್ತಿ, ತರೀಕೆರೆ ತಾಲ್ಲೂಕು ಮಾಜಿ ಅಧ್ಯಕ್ಷ ವೈದ್ಯ ಭೈರಲಿಂಗಪ್ಪ, ತರಬೇತುದಾರ ಸತ್ಯನಾರಾ ಯಣ ಭಟ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.