ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಕಿವುಡರ ಸಂಘದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ  ಜಿಲ್ಲಾ ಕಿವುಡರ ಸಂಘದ ಪ್ರತಿಭಟನೆ

ದಾವಣಗೆರೆ, ಆ. 20- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಿವುಡರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ  ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಡಿ ಗ್ರೂಪ್  ಕೆಲಸ ನೀಡಬೇಕು. ಭ್ರಷ್ಟ ಅಂಗವಿಕಲ ಕಲ್ಯಾಣಾಧಿಕಾರಿಯನ್ನು ವರ್ಗಾಯಿಸಬೇಕು. ಐ.ಎಸ್.ಎಲ್. ಸಂವಹನಕಾರರನ್ನು ನೇಮಿಸಬೇಕು.

ಶ್ರವಣದೋಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದೇ ಮೋಸ ಮಾಡುತ್ತಿರುವ ಶಾಲೆಗೆ ಅನುದಾನ ತಡೆಯಬೇಕು. 

ಐಎಸ್‌ಎಲ್ ತರಬೇತಿ ನಡೆಸಬೇಕು. ಶೇ.5ರ ಮೀಸಲಾತಿ ಸೌಲಭ್ಯ ನೀಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಕಲಿ ಅಂಗವಿಕಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ಆಸೀಫ್ ಎಸ್., ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಬಿ.ಕೆ.ಪಿ., ಖಜಾಂಚಿ ಪ್ರದೀಪ್ ಎನ್. ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

error: Content is protected !!