ದಾವಣಗೆರೆ, ಆ. 20- ನಗರ ಹಾಗೂ ನಗರದ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶ ಸೇರಿದಂತೆ ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ದಾವಣಗೆರೆ
ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ : ಪೊಲೀಸ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಚಾರ್ಯೆ ಜೆ.ಎಸ್. ವನಿತಾ, ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು, ಶೈಕ್ಷಣಿಕ ಮುಖ್ಯಸ್ಥ ಎಂ. ವಾಸಿಮ್ ಪಾಷಾ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶೀಬಾರಾಣಿ, ಪಿ.ವಿ. ಪ್ರಭು, ಆರ್. ಸವಿತಾ ಮತ್ತು ಸಿಬ್ಬಂದಿ ಇದ್ದರು.
ಜೈನ್ ವಿದ್ಯಾಲಯ : ವಿದ್ಯಾಲಯದ ಸ್ಟೇಟ್ ಸಿಲಬಸ್, ಸಿಬಿಎಸ್‌ಸಿಇ ಹಾಗೂ ಪಿಯು ಕಾಲೇಜಿನಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಾಲೇಜಿನ ಅಧ್ಯಕ್ಷ ಎಚ್. ರಮೇಶ ಕುಮಾರ್, ಕಾರ್ಯದರ್ಶಿ ಜೆ. ರಮೇಶ ಕುಮಾರ್ ಹಾಗೂ ಇತರೆ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾ ಯರು, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.
ವೀರಮಾಹೇಶ್ವರ ಕ್ರೆಡಿಟ್ ಕೋ-ಆಪ್ ಸೊಸೈಟಿ : ಸೊಸೈಟಿಯ ಅಧ್ಯಕ್ಷ ವೀರಭದ್ರಸ್ವಾಮಿ ತ್ಯಾವಣಿಗೆ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಸಿ. ಪಂಚಾಕ್ಷರಯ್ಯ ಬಸಾಪುರ, ನಿರ್ದೇಶಕರಾದ ಎಂ.ಎಲ್.ಆರ್. ಬಸವರಾಜಯ್ಯ, ಬಿ.ಎಂ. ರವಿ, ಆರ್.ಎಂ ವೀರಯ್ಯ, ರೇಖಾ, ಪ್ರಭಾರಿ ಕಾರ್ಯದರ್ಶಿ ನಾಗರಾಜಯ್ಯ ಐನಳ್ಳಿ ಮಠ, ಸಿಬ್ಬಂದಿ ತನುಜಾ, ವಿನಯ್ ಕುಮಾರ್, ರಾಜೇಂದ್ರ ಪ್ರಸಾದ್, ಗಣೇಶ್, ಚಂದ್ರಿಕಾ, ಪಿಗ್ನಿ ಸಂಗ್ರಾಹಕರಾದ ಸುರೇಶ್, ನಾಗರಾಜ್, ಮಂಜು, ವೀರಯ್ಯ ಇದ್ದರು.
ಮಹಿಳಾ ಬಸವ ಕೇಂದ್ರ : ಸತೀಶ್ ಪೂಜಾರಿ ಧ್ವಜಾರೋಹಣ ನೆರವೇರಿಸಿ ದರು. ಬಸವ ಕೇಂದ್ರದ ಅಧ್ಯಕ್ಷೆ ಮಹಾದೇವಮ್ಮ ಮಲ್ಲಿಕಾರ್ಜುನ, ಕೇರಂ ಗಣೇಶ್, ಎಸ್. ಮನು, ಹನುಮಂತ ಬಾಲ, ಕಾರ್ತಿಕ್, ಶ್ರೀನಿವಾಸ ರೆಡ್ಡಿ, ಮಹಾಂತೇಶ್, ಸುನೀಲ್ ಕುಮಾರ್, ರಾಜು, ವಿಶಾಲ, ರಿಯಾಜ್ ಗಿಡ್ಡಣ್ಣ, ಲಲಿತ, ಸುಜಾತ, ನಸೀರ್, ಶಾಂತಲಾ, ಶಾಂತ, ಸುಜನ, ಲೀಲಾ, ಲಕ್ಷ್ಮಿ, ಸುಜಾತಾ ಇದ್ದರು. ಗಗನ್, ತೇಜಸ್ವಿನಿ, ಅಯಾನ್ ಸ್ವಾತಂತ್ರ ಹೋರಾಟಗಾರರ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
ಮಹಾಲಕ್ಷ್ಮಿ ದೇವಿ ಮಹಿಳಾ ಸ್ವಸಹಾಯ ಸಂಘ : ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಂಘದ ಸದಸ್ಯರಾದ ಮಹಾಲಕ್ಷ್ಮೀದೇವಿ, ಪೂರ್ಣಿಮಾ, ಶಾಂತಮ್ಮ, ಮಂಜಮ್ಮ, ಚೈತ್ರಾ, ಎಸ್. ನೇತ್ರಾ, ಎನ್. ಶ್ವೇತಾ, ತ್ರಿವೇಣಿ, ನಳಿನಮ್ಮ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ, ಕೇರಂ ಗಣೇಶ್, ಎಸ್. ಮಾನು, ಸುರೇಶ್, ಗುರು, ಹನುಮಂತ ಬಾಲ, ಚಂದ್ರು, ಲಕ್ಷ್ಮಣಪ್ಪ, ಬಸವರಾಜಪ್ಪ ಮತ್ತಿತರರಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ : ಸಂಗೊಳ್ಳಿ ರಾಯಣ್ಣ ಜನ್ಮ ದಿನೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶ್ರೀನಿವಾಸ್ ಚಿನ್ನಿಕಟ್ಟಿ, ನಾಗರಾಜ್, ಗಿರೀಶ್ ಕುಮಾರ್, ಖಾದರ್ ಭಾಷಾ, ಈಶ್ವರ್, ಸುರೇಶ್, ಧೀರೇಂದ್ರ, ಚಂದ್ರು, ಗುರುಮೂರ್ತಿ, ಜಬಿವುಲ್ಲಾ, ಆಟೋ ರಫೀಕ್, ದಾದಾಪೀರ್, ಅಯೂಬ್, ಗೋಪಾಲ್ ದೇವರ ಮನೆ, ಪ್ರದೀಪ್, ಭಾಷಾ ಸಾಬ್, ಧರ್ಮರಾಜ್, ಪರಮೇಶ್, ಮಂಜು, ಪ್ರಕಾಶ್, ಕರಿಬಸಪ್ಪ, ಸಂಜು, ಪರಶುರಾಮ್, ಚಂದ್ರು, ತುಳಸಿ ರಾಮ್, ಮಂಜುನಾಥ್, ಬಸವರಾಜ್, ಜಿ.ಎಸ್. ಸಂತೋಷ್, ಎನ್.ಬಿ.ಎ. ಲೋಕೇಶ್, ತನ್ವೀರ್, ಮುಸ್ತಫಾ, ಬಾಷಾ, ಬಿ. ಮಂಜುಳಾ ಗಣೇಶ್, ಮಂಜುಳಾ ಮಾಂತೇಶ್, ಶಾಂತಮ್ಮ, ಕವಿತಾ, ಆಲೂರ್ ನಾಗಮ್ಮ, ಅರುಣ, ಸಂಜು ಇದ್ದರು.
ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ : ವಿಶ್ರಾಂತ ಪ್ರಾಧ್ಯಾಪಕ ಗಂಗಾಧರಯ್ಯ ಹಿರೇಮಠ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಎಂ.ಬಿ ಸಂಗಮೇಶ್ವರ ಗೌಡ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಎಸ್.ಆರ್. ಶಿರಗಂಬಿ, ಶಾಲಾ ಮುಖ್ಯಸ್ಥರಾದ ಎ.ಎಸ್. ಕುಸುಮ, ಎಸ್. ಮಂಜುನಾಥ್, ಡಾ.ಪಿ.ಎಂ. ಪ್ರೇಮಾ, ಡಾ.ಜಿ.ಎನ್.ಎಚ್. ಕುಮಾರ್, ಎಸ್. ಪ್ರಸಾದ್ ಬಂಗೇರ ಮತ್ತು ಶಿಕ್ಷಕರಿದ್ದರು.
ಡಾ. ಎಸ್. ಎಸ್. ಎನ್. ಪಿ. ಶಾಲೆ : ವಿದ್ಯಾಸಂಸ್ಥೆಯ ಡೀನ್ ಮಂಜುನಾಥ ರಂಗರಾಜು ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಎಫ್ ಅಕಾಡೆಮಿಯ ಟ್ರೈನಿಂಗ್ ಇನ್‌ಸ್ಪೆಕ್ಟರ್ ಮಂಜಾ ನಾಯ್ಕ ಧ್ವಜಾ ರೋಹಣ ನೆರವೇರಿಸಿದರು. ಪ್ರಾಚಾರ್ಯೆ ಕಮಲ್ ಬಿ. ನಾರಾಯಣ್ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದರು. ಉಪಪ್ರಾಚಾರ್ಯ ರಮೇಶ್ ಬಾಬು, ಶಾಲಾ ಸಂಯೋಜಕಿ ರುತಿಕಾ ಮತ್ತು ಇತರರು ಉಪಸ್ಥಿತರಿದ್ದರು.
ರಾಮನಗರದ ಗಾಂಧಿ ಭವನ : ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ ಚಿತ್ರಿಕಿ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ತರಳಬಾಳು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ : ಶಾಲೆಯ ಸಲಹಾ ಸಮಿತಿಯ ಅಧ್ಯಕ್ಷ ಎಸ್. ಸುರೇಂದ್ರಪ್ಪ ಧ್ವಜಾರೋಹಣ ನೆರವೇರಿಸಿ, ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಬಗ್ಗೆ ತಿಳಿಸಿದರು. ಉಪಾಧ್ಯಕ್ಷ ಬಿ.ಟಿ. ಮರುಳ ಸಿದ್ದಪ್ಪ, ಸದಸ್ಯರಾದ ಕೆ.ಎನ್. ಕಲ್ಲಪ್ಪ, ಸಿ. ವಿಜಯ ಕುಮಾರ್, ಟಿ. ರೇವಣಸಿದ್ದಪ್ಪ, ಕೆ.ಬಿ. ಲಿಂಗರಾಜ್, ಕೆ.ಬಿ. ಪ್ರಕಾಶ್, ಕೆ.ಬಿ. ಮರುಳಪ್ಪ, ಪ್ರದೀಪ್ ಕುಮಾರ್, ಮಹೇಂದ್ರ, ಶಾಲಾ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳಿದ್ದರು.
ಆವರಗೆರೆ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ : ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಾಥಮಿಕ ವಿಭಾಗದ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ, ಎಲ್ಲರನ್ನೂ ಆಕರ್ಷಿಸಿದರು. ಸಹ ಶಿಕ್ಷಕಿ ತೇಜಶ್ವಿನಿ ಹಾಗೂ ಸುಗ್ಗಲಾದೇವಿ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ : ಕಲಾಕುಂಚ ಸಮಿತಿ ಸದಸ್ಯ ವಿ. ಶಾಂತಪ್ಪ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿ ಮಾತನಾಡಿದರು. ಶ್ರೀಮತಿ ಚಂದ್ರಶೇಖರ ಅಡಿಗ ಪ್ರಾರ್ಥಿಸಿದರು. ಕೆ.ಸಿ. ಉಮೇಶ್ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಶ್ರೀಮತಿ ವಾಸಂತಿ ಮಂಜುನಾಥ್, ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ, ಕೆ.ಹೆಚ್.ಮಂಜುನಾಥ್, ಶ್ರೀಮತಿ ಪ್ರಭಾ ರವೀಂದ್ರ, ವಿ. ಕೃಷ್ಣಮೂರ್ತಿ, ಅಬ್ದುಲ್ ಸತ್ತಾರ್ ಸಾಬ್, ಮುಕ್ತಾ ಶ್ರೀನಿವಾಸಪ್ರಭು, ಲೀಲಾ ಸುಭಾಷ್, ಭಾರತಿ ರಾಮನಾಥ್ ಖಮಿತ್ಕರ್, ನಿರ್ಮಲ ರಾಜೇಂದ್ರಬಾಬು, ಸುಚಿತ್ರ ಗಣೇಶ್ ರಾವ್, ಶೋಭಾ ಸುರೇಶ್‌ಬಾಬು, ಮಮತಾ ಕೊಟ್ರೇಶ್, ಸುಮಾ ಏಕಾಂತಪ್ಪ, ಲಕ್ಷ್ಮಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
ಕಲಾಕುಂಚ ಕಛೇರಿಯ ಹೊರಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಛೇರಿ ಕಾರ್ಯದರ್ಶಿ ಎಂ.ಎನ್.ಪ್ರಸಾದ್ ವಂದಿಸಿದರು.
ಶ್ರೀ ಜಗದ್ಗುರು ಜಯವಿಭವ ವಿದ್ಯಾ ಸಂಸ್ಥೆ : ಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್.ಚಿಗಟೇರಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುರೇಶ್‌ನಾಯ್ಕ್, ಗುರುಬಸಮ್ಮ ವಿ.ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್. ನಿಂಗಪ್ಪ, ಗುರುಬಸಮ್ಮ ವಿ. ಚಿಗಟೇರಿ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀರಮ್ಮ ಎಂ.ಎಸ್. ಸೇರಿದಂತೆ ಎಲ್ಲಾ ಶಾಲೆಗಳ ಶಿಕ್ಷಕ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿ ವಿತರಿಸಲಾಯಿತು.
ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ ಹಾಗೂ
ಶ್ರೀ ಬೀರಲಿಂಗೇಶ್ವರ ಪ.ಪೂ. ಕಾಲೇಜು : ಸಂಘದ ಜಿಲ್ಲಾಧ್ಯಕ್ಷ ಹೆಚ್.ಜಿ. ಗಣೇಶಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬಿ.ಬಿ. ಮಲ್ಲೇಶಪ್ಪ, ಎಲ್.ಬಿ. ಭೈರೇಶ್, ವೈ. ಶಶಿಧರ್, ದೇವಿಕುಮಾರ್, ಶ್ರೀ ಬೀರಲಿಂಗೇಶ್ವರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್. ರಾಜಶೇಖರಪ್ಪ ಉಪಸ್ಥಿತರಿದ್ದು, ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿ.ಬಿ. ಬೀರಪ್ಪ, ವೈ. ವಿರೂಪಾಕ್ಷಪ್ಪ, ಬಿ. ಗುಡ್ಡಪ್ಪ, ಕೆ. ರೇವಣಸಿದ್ದಪ್ಪ, ಮನು, ರಮೇಶ್, ವಿದ್ಯಾವರ್ಧಕ ಸಂಘ, ಕಾಲೇಜು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಾನಸಧಾರಾ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ : ಆರೋಗ್ಯ ಇಲಾಖೆಯ ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಎಂ. ಸಂತೋಷ್‌ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಸಂಸ್ಧೆಯ ಅಧ್ಯಕ್ಷ ಮಲ್ಲೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಶ್ರೀಮತಿ ಜಯಲಕ್ಷ್ಮಿ, ಸಂಸ್ಥೆಯ ನಿರ್ದೇಶಕರಾದ ದಿವ್ಯ ಸಂತೋಷ್, ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಚಂದನ್, ಎಪಿಡಿ ಸಂಸ್ಥೆಯ ಸಿಬ್ಬಂದಿ ಶಂಕ್ರಮ್ಮ, ಮಾನಸಧಾರಾ ಸಂಸ್ಥೆಯ ಸಿಬ್ಬಂದಿಗಳಾದ ಹರೀಶ್, ಮಂಜುನಾಥ್, ವಿಜಯ, ದಿನೇಶ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ – ಇನ್ನರ್‌ವ್ಹೀಲ್ ಕ್ಲಬ್ : ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಸಮೂಹ ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾ ಯಿತು. ನಿವೃತ್ತ ಯೋಧ ಓ.ಬಿ. ಶಶಿಕಾಂತ್ ಧ್ವಜಾರೋಹಣ ನೆರವೇರಿಸಿದರು.
ಹಿರಿಯ ರೋಟೇರಿಯನ್ ಚಿಗಟೇರಿ ಮುರುಗೇಶ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದಾವಣಗೆರೆಯ ಕೊಡುಗೆ ಬಗ್ಗೆ ಮಾತನಾಡಿದರು.
ರೋಟರಿಯ ರಾಜ್ಯಪಾಲ ನಯನ್ ಪಾಟೀಲ್, ಅಧ್ಯಕ್ಷ ಕಿಶನ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಪ್ರತಿಭಾ ಪಡೆಗಲ್, ಸಿ.ಕೆ. ರಂಗಪ್ಪ, ವಿಶ್ವಜಿತ್ ಜಾಧವ್, ಗಜಾನನ ಭೂತೆ, ರಮೇಶ್ ಅಂಬರ್‌ಕರ್, ಬ್ರಿಜೇಶ್, ನಾಗರಾಜ್ ಜಾಧವ್, ಮೃತ್ಯುಂಜಯ, ಸುನೀತ ಮೃತ್ಯುಂಜಯ, ಪವನ್, ಅಶೋಕ್ ರಾಯಭಾಗಿ, ಸುಜೀತ್ ಕುಮಾರ್, ಬಸವರಾಜ, ಈಶ್ವರ್‌ಸಿಂಗ್, ಪುಟ್ಟೇಶ್, ಶಂಕರ್ ಪಾಟೀಲ್, ಮಹಮ್ಮದ್ ಗೌಸ್, ಸಮೀರಾಬಾನು, ಉಮೇಶ್ (ಸಿ.ಎ), ಎ.ಎನ್. ಶಿವಕುಮಾರ್ ಇನ್ನಿತರರಿದ್ದರು.
ಕರ್ನಾಟಕ ರಾಜ್ಯ ಸರ್ವ ಜನಾಂಗದ ಏಕತಾ ರಕ್ಷಣಾ ಸಮಿತಿ : 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಸರ್ವ ಜನಾಂಗದ ಏಕತಾ ರಕ್ಷಣಾ ಸಮಿತಿ ವತಿಯಿಂದ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ನಗರ ಪಾಲಿಕೆ ಆಶ್ರಯ ಸಮಿತಿ ಸದಸ್ಯರೂ ಆದ ಸರ್ವ ಜನಾಂಗದ ಏಕತಾ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶಾಮನೂರಿನ ಕಣ್ಣಾಳ ಅಂಜಿನಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯ ಎಲ್.ಡಿ. ಗೋಣಪ್ಪ, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಮಂಜುಳಮ್ಮ, ಗೌರವಾಧ್ಯಕ್ಷ ಮಾರುತಿ ರಾವ್, ಜಿಲ್ಲಾಧ್ಯಕ್ಷ ಹನುಮಂತ್, ಗಿರೀಶ್, ಯುಸೂಫ್, ಸಮೀರ್, ಅಳಗವಾಡಿ ನಿಂಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ರತ್ನಮ್ಮ ವಂದಿಸಿದರು.
ಶಿರಮಗೊಂಡನಹಳ್ಳಿ
ಅನ್‌ಮೋಲ್ ವಿದ್ಯಾ ಸಂಸ್ಥೆ : ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೆ.ಇ. ಭೈರೇಶ್ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಪ್ರಾಚಾರ್ಯ ಯು. ಕೊಟ್ರೇಶ್ ಹಾಗೂ ಸಹ ಶಿಕ್ಷಕ ಅಶೋಕ ಗೌಡ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು. ಎಲ್.ಸುಬ್ರಮಣ್ಯ, ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.
ಹರಿಹರ
ಬನ್ನಿಕೋಡು : ಜ್ಞಾನ ದೀಕ್ಷಾ ಸೆಂಟ್ರಲ್ ಸ್ಕೂಲ್ : ಶಾಲೆಯ ಕಾರ್ಯದರ್ಶಿ ಹಾಗೂ ತಾ.ಪಂ. ಮಾಜಿ ಸದಸ್ಯರಾದ ಮಂಜುಳಾ ಅಣಬೇರು ಶಿವಮೂರ್ತಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.
ರಾಣೇಬೆನ್ನೂರು
ಖನ್ನೂರು ವಿದ್ಯಾನಿಕೇತನ ಸ್ಕೂಲ್ : ಸಂಸ್ಥೆಯ ಅಧ್ಯಕ್ಷ ಡಾ.ಎಂ. ಪ್ರವೀಣ ಖನ್ನೂರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಾ. ಶೈಲಶ್ರೀ ಪಿ. ಖನ್ನೂರ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ ಹಾಗೂ ಮನರಂಜನೆ ಕಾರ್ಯಕ್ರಮ ನಡೆಯಿತು. ಗಾಯತ್ರಿ ವಂದಿಸಿದರು. ಲಕ್ಷ್ಮಿ ಆಡೂರ ಮತ್ತು ಪರ್ಣಿಕಾ ನಿರೂಪಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ನಾಗೇಶ ಮುರುಡಣ್ಣ, ಶಾಲೆಯ ಪ್ರಾಚಾರ್ಯ ಮನೀಶ್ ಅರಿಂಬಿಲ್, ಪಿಯು ಕಾಲೇಜಿನ ಪ್ರಾಚಾರ್ಯ ಸುಬ್ಬರಾವ ಕಟಕಮ್, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಬೆರಿಲ್ ಡಾಸನ್, ಬಿ.ಸಿ. ಮೋನಶ್ರೀ, ಸಂಸ್ಥೆಯ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದರು.