ದಾವಣಗೆರೆ, ಆ.20- ಶ್ರೀ ಸೇವಾಲಾಲ್ ಮರಿಯಮ್ಮ ಜೀರ್ಣೋದ್ಧಾರ ಟ್ರಸ್ಟ್ ಹಾಗೂ ಮರಿಯಮ್ಮ ದೇವಸ್ಥಾನದ ಟ್ರಸ್ಟ್ ವತಿಯಿಂದ ಇದೇ ದಿನಾಂಕ 28ರಂದು ಶ್ರೀ ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ನಾಯ್ಕ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ನಾಡಿದ್ದು ದಿನಾಂಕ 22ರ ಗುರುವಾರ ಮಧ್ಯಾಹ್ನ ಬಂಜಾರ ಕಲಾ ತಂಡದೊಂದಿಗೆ ಶ್ರೀ ಲಿಂಗೇಶ್ವರ ದೇವಸ್ಥಾನದಿಂದ ಕುಂಭ ಮೇಳದೊಂದಿಗೆ ಭಾರತ್ ಕಾಲೋನಿ 9ನೇ ಕ್ರಾಸ್ ಶ್ರೀ ಸೇವಾಲಾಲ್ ದೇವಸ್ಥಾವದರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್. ವೆಂಕಟೇಶ್ ನಾಯ್ಕ, ಆರ್.ಎಲ್. ದೇವೀರಮ್ಮ, ತಿಮ್ಮೇಶ್ ನಾಯ್ಕ, ರಮೇಶ್ ನಾಯ್ಕ, ಅಜಯ್ ನಾಯ್ಕ, ಹನುಮಂತ ನಾಯ್ಕ, ಕರಿಬಸವನಾಯ್ಕ ಇತರರಿದ್ದರು.