ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಇಂದು ಮತ್ತು ನಾಳೆ ನಡೆಯಲಿದೆ.
ಇಂದು ಬೆಳಿಗ್ಗೆ 8ಕ್ಕೆ ಫಲ, ಪುಷ್ಪಾದಿಗಳ ಮೆರವಣಿಗೆ ಹಾಗೂ ಗುರುಗಳಿಗೆ ಫಲ-ಪಂಚಾಮೃತ ಅಭಿಷೇಕ, 9.30ರಿಂದ ರಾಯರ ಕನಕಾಭಿಷೇಕ ಮತ್ತು ತುಲಾಭಾರ, ಪಲ್ಲಕ್ಕಿ ಉತ್ಸವ, ಬೆಳ್ಳಿ ರಥೋತ್ಸವ ಹಾಗೂ ಪವಮಾನ ಹೋಮ ನಡೆಯಲಿದೆ.
ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಸಮುದಾಯ ಭವನದಲ್ಲಿ ವಿಶೇಷ ದೀಪಾಲಂಕಾರ ಸೇವೆ, ರಾತ್ರಿ 8ಕ್ಕೆ ಮಹಾಮಂಗಳಾರತಿ ನಡೆಯಲಿದೆ.