ಜಿಲ್ಲಾ ಚೀಟಿ ನಿಧಿಗಳ ಸಂಘದ ಸಭೆ

ಜಿಲ್ಲಾ ಚೀಟಿ ನಿಧಿಗಳ ಸಂಘದ ಸಭೆ

ದಾವಣಗೆರೆ, ಆ. 19 – 42ನೇ ಚೀಟಿ ನಿಧಿಗಳ ದಿನಾಚರಣೆಯ ಅಂಗವಾಗಿ ದಾವಣಗೆರೆ ಜಿಲ್ಲಾ ಚೀಟಿ ನಿಧಿಗಳ ಸಂಘದಿಂದ ನಗರದ ಜೆ.ಪಿ. ಸಭಾಂಗಣದಲ್ಲಿ ಸಾರ್ವಜನಿಕ ಜಾಗೃತಿ ಸಭೆಯು ಇಂದು ನಡೆಯಿತು.

ಜಿಲ್ಲಾ ಚೀಟಿ ನಿಧಿಗಳ ಉಪ ನಿಬಂಧಕ ಮಧು ಶ್ರೀನಿವಾಸ್, ಚೀಟಿ ನಿಧಿಗಳ ಸಹಾಯಕ ನಿಬಂಧಕರಾದ ಶ್ರೀಮತಿ ಮಂಜುಳಾ,  ಜಿಲ್ಲಾ ವಕೀಲರ ಸಂಘದ ಸಹ ಕಾರ್ಯದರ್ಶಿ ಮತ್ತು ಸಂಘದ ಕಾನೂನು ಸಲಹೆಗಾರ ಎ.ಎಸ್. ಮಂಜುನಾಥ್,  ಸಹಕಾರ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಭಾಗ್ಯಶ್ರಿ ಮತ್ತು ಜಗದೀಶ್ ಅವರುಗಳು ಮುಖ್ಯ ಅತಿಥಿಗಳಾಗಿ ಅಗಮಿಸಿ ಸಾರ್ವಜನಿಕರು ಅಧಿಕೃತ ಚೀಟಿ ನಿಧಿಗಳಲ್ಲಿ ವ್ಯವಹರಿಸಿದಾಗ ಮಾತ್ರ ನಿಮ್ಮ ಹಣಕ್ಕೆ ಭದ್ರತೆ ಇರುತ್ತದೆ, ನೀವು ಪಡೆದುಕೊಳ್ಳುವ ಹಣಕ್ಕೆ ಕಡಿಮೆ ಬಡ್ಡಿ ಬೀಳುತ್ತದೆ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಬಹಳ ವರ್ಷ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಅವರ ಸೇವೆಯನ್ನು ಗುರುತಿಸಿ, ಸನ್ಮಾನಿಸಲಾಯಿತು. 

ಜಿಲ್ಲಾ ಚೀಟಿ ನಿಧಿಗಳ ಸಂಘದ ಅಧ್ಯಕ್ಷರಾದ ಭಾಗ್ಯರಂಗ ಚಿಟ್ಸ್‌ನ ರಂಗರಾವ್, ಉಪಾಧ್ಯಕ್ಷರಾದ ನವೋದಯ ಚಿಟ್ ಫಂಡ್‌ನ ಸತ್ಯನಾರಾಯಣ ಮೂರ್ತಿ, ಕಾರ್ಯದರ್ಶಿ ಅಂದನೂರು ಚಿಟ್ಸ್‌ನ ಅಂದನೂರು ರಾಜೇಶ್, ಸಹ ಕಾರ್ಯದರ್ಶಿ ಮಾರುತಿ ಚಿಟ್ಸ್‌ನ ಷಣ್ಮುಖರಾಜು, ಖಜಾಂಚಿ ವಾಸವಾಂಬ ಚಿಟ್ಸ್‌ನ ರೆಡ್ಡಯ್ಶ ಮತ್ತು ನಿರ್ದೇಶಕರುಗಳಾದ ಸ್ಕಂದ ಚಿಟ್ಸ್‌ನ ಲೋಹಿತ್, ಗುರು ರಾಘವೇಂದ್ರ ಚಿಟ್ಸ್ ನ ಪದ್ಮರಾಜ್, ಶ್ರೀನಿವಾಸ ಚಿಟ್ಸ್‌ನ ಅಗಡಿ ಸತೀಶ್, ಕೆಪಿಆರ್‌ ಶ್ರೀರಕ್ಷಾ ಚಿಟ್ಸ್‌ನ ರವಿ, ಗುರು ಚಿಟ್ಸ್‌ನ ಮಲ್ಲಿಕಾರ್ಜುನ ಸ್ವಾಮಿ, ಕ್ಷೇತ್ರಪಾಲ ಚಿಟ್ಸ್‌ನ ನವೀನ್ ಜೈನ್, ಸಿದ್ದೇಶ್ವರ ಚಿಟ್ಸ್‌ನ ಸಿದ್ದಯ್ಯ ಮತ್ತು ಸಿರಿ ಚಿಟ್ಸ್‌ನ ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.

error: Content is protected !!