ಹರಪನಹಳ್ಳಿ, ಆ. 19 – ಪಟ್ಟಣದ ಅರಸಿಕೇರೆ ಬೈಪಾಸ್ ರಸ್ತೆ ಬಳಿ ಮುಕ್ತಾಯ ಹಂತದಲ್ಲಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಹಾಗೂ ನಾಯಕ ಸಮಾಜದ ಪದಾಧಿಕಾರಿಗಳು ನಿನ್ನೆ ಭೇಟಿ ನೀಡಿ ಭವನವನ್ನು ಪರಿಶೀಲಿಸಿದರು.
ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಪನಹಳ್ಳಿ ತಾಲ್ಲೂಕಿನಲ್ಲಿ ಬಹುದೊಡ್ಡ ಪ್ರಮಾಣದಲ್ಲಿರುವ ನಾಯಕ ಸಮಾಜ ಇದಾಗಿದ್ದು, ಇದಕ್ಕೆ ಇನ್ನು ಹೆಚ್ಚಿನ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಗೌರವ ಅಧಕ್ಷ ಹೆಚ್.ಕೆ. ಹಾಲೇಶ್ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಹಿಳಾ ಘಟಕದ ಅಧ್ಯಕ್ಷರಾದ ಎಚ್.ಟಿ. ವನಜಾಕ್ಷಮ್ಮ, ಕಾರ್ಯದರ್ಶಿ ಹೆಚ್.ಕೆ. ಮಂಜುನಾಥ ಉಪಾಧ್ಯಕ್ಷರುಗಳಾದ ಯು. ಸುರೇಶ್ ಮಂಡಕ್ಕಿ, ಉಚ್ಚಂಗಿದುರ್ಗದ ಟಿ. ಮಂಜಪ್ಪ, ತೆಲಗಿ ಅಂಜಿನಪ್ಪ, ನಿಟ್ಟೂರು ಹನುಮಂತಪ್ಪ ಖಜಾಂಚಿ ಬಾಲೇನಹಳ್ಳಿ ರೇವಣಸಿದ್ದಪ್ಪ, ಮುಖಂಡ ಬಾಲೇನಹಳ್ಳಿ ಕೆಂಚನಗೌಡ, ಲಕ್ಷ್ಮಿ ಚಂದ್ರಶೇಖರ್, ಗಿಡ್ಡಳಿ ಡಿ. ನಾಗರಾಜ ಹನುಮಂತಪ್ಪ, ತೆಲಗಿ ಶಿವಪ್ಪ, ಅಂಜಿನಪ್ಪ, ಮಂಜುಳಾ, ಶೋಭಾ, ಮೈದೂರು ಮಾರುತಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.