ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವು ಇಂದಿನಿಂದ ಮೂರು ದಿನ ನಡೆಯಲಿದೆ.
ಇಂದು ಬೆಳಗ್ಗೆ 7ಕ್ಕೆ ಅಷ್ಟೋತ್ತರ ಪಂಚಾಮೃತ ಹಾಗೂ ಅಲಂಕಾರ ಸೇವೆ. 9ರಿಂದ ಪ್ರವಚನ, ಮಂಗಳ ಕಾರ್ಯಕ್ರಮ, 10ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿವೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, 1 ಗಂಟೆಗೆ ಮಹಾ ಪ್ರಸಾದ ಹಾಗೂ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾತ್ರಿ 8ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎ.ಬಿ. ಬಸವರಾಜ್, ಕಾರ್ಯದರ್ಶಿ ಸುಕುಮಾರ್ , ಖಜಾಂಚಿ ಎಸ್. ರಂಗನಾಥ್ ತಿಳಿಸಿದ್ದಾರೆ.