ಬ್ರಾಹ್ಮಣ ಸೇವಾಸಂಘದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ

ಬ್ರಾಹ್ಮಣ ಸೇವಾಸಂಘದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ

ದಾವಣಗೆರೆ, ಆ. 18 – ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಶಂಕರ ಸಮುದಾಯ ಭವನದಲ್ಲಿ ಭಾನುವಾರ ಬ್ರಾಹ್ಮಣ ಸೇವಾ ಸಂಘದಿಂದ 85 ವಸಂತಗಳನ್ನು ಪೂರೈಸಿದ ತ್ರಿಮಸ್ಥ ಹಿರಿಯ ಚೇತನರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ಅಧ್ಯಕ್ಷತೆ ವಹಿಸಿದ್ದರು. `ಹಿರಿಯರ ವಿವೇಕವು ನಮ್ಮನ್ನು ಮುನ್ನಡೆಸಲಿ. ನಮ್ಮ ಸಂಸ್ಕೃತಿ, ಸಂಪ್ರದಾಯ ರಾಷ್ಟ್ರದ ಶಕ್ತಿಯಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು  ತಿಳಿಸಿದರು.

ಎಲ್. ಶಾಮಸುಂದರ ರಾವ್,  ಎಂ. ಜೆ. ಚಂದ್ರಶೇಖರ, ಅಶ್ವತ್ಥಾಚಾರ್, ಬಿ.ಕೆ. ಮೂರ್ತಿ, ಎಲ್. ಶ್ರೀಪಾದ ರಾವ್, ಎಚ್. ಸಿ.ಕುಲಕರ್ಣಿ, ಕೆ.ಎನ್. ಸ್ವಾಮಿ, ಕೆ.ಎನ್. ರಾಮಸ್ವಾಮಿ, ಗುರುನಾಥ ರಾವ್ ಬಿ. ಮಜುಂದಾರ್, ಸಣ್ಣಮ್ಮ, ಎನ್. ಆರ್. ರಮಾಬಾಯಿ, ಕಮಲಾಬಾಯಿ, ಸಾವಿತ್ರಮ್ಮ, ಡಿ.ಎನ್. ರುಕ್ಮಿಣಮ್ಮ, ಸರ್ವಮಂಗಳ, ಭಾರತಿ ಬ್ಯಾಹಟ್ಟಿ, ಗಿರಿಜಮ್ಮ ಇವರನ್ನು ಸನ್ಮಾನಿಸಲಾಯಿತು.

ದಾವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಎಚ್.ಬಿ.ಮಂಜುನಾಥ್, ಹಿರಿಯರಾದ ಅಣ್ಣಾಜಿ, ಭೀಮಾಜಿ ಕುಲಗೋಡ್, ಎಸ್.ರಾಧಮ್ಮ, ರುಕ್ಮಿಣಿ ಬಾಯಿ, ಮಂದಾಕಿನಿ ಕುಲಗೋಡ್, ಯಶೋದಮ್ಮ, ವಿಮಲಮ್ಮ, ಸುಮಿತ್ರಮ್ಮ ಅವರಿಗೆ ಮನೆಗೆ ತೆರಳಿ ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎಸ್. ಗೋಪಾಲ ದಾಸ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!