ಹೊಳೆಸಿರಿಗೆರೆಯಲ್ಲಿ ಇಂದು ಬನಶಂಕರಿ ದೇವಸ್ಥಾನ ಪ್ರಾಣ ಪ್ರತಿಷ್ಠಾಪನೆ

ಹೊಳೆಸಿರಿಗೆರೆಯಲ್ಲಿ ಇಂದು  ಬನಶಂಕರಿ ದೇವಸ್ಥಾನ ಪ್ರಾಣ ಪ್ರತಿಷ್ಠಾಪನೆ

ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಬನಶಂಕರಿ ದೇವಿ ದೇವಸ್ಥಾನ ಪ್ರಾಣ ಪ್ರತಿಷ್ಠಾಪನೆ ಹಾಗೂ ಚೌಡೇಶ್ವರಿ ದೇವಿಯ ಕಳಸಾರೋಹಣ ಸಮಾರಂಭವು ಇಂದು ನಡೆಯಲಿದೆ ಎಂದು ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ. ಕೊಟ್ರಪ್ಪ ಗೌಡ್ರು ತಿಳಿಸಿದ್ದಾರೆ.

ಇಂದು ಮುಂಜಾನೆ ದೇವಸ್ಥಾನ ಪ್ರವೇಶ ಮಹೋತ್ಸವ, ನಂತರ ದೇವಿ ಮೂರ್ತಿಗೆ ಅಭಿಷೇಕ, ಹೋಮ ಹವನ, ಬೆಳಗ್ಗೆ 8 ಗಂಟೆಗೆ ಕುಂಭಾಭಿಷೇಕ ದೊಂದಿಗೆ ಬೆಳಿಗ್ಗೆ 10-22 ಕ್ಕೆ ಬನಶಂಕರಿ ದೇವಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣವು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮಿಗಳು, ಲಿಂಗದಹಳ್ಳಿ ಮಠದ ಶ್ರೀ ವೀರಭದ್ರ ಸ್ವಾಮಿಗಳು, ಹೊಳೆಸಿರಿಗೆರೆ  ಶ್ರೀ ಮುರುಗೇಂದ್ರಯ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ.

ಬೆಳಗ್ಗೆ 11-30 ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ,  ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವೀರಾಪುರ ಹಿರೇಮಠದ ಡಾ. ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ,  ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ನಂದಿಗುಡಿ ನೊಳಂಬ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಎರೆಹೊಸಳ್ಳಿ ರಡ್ಡಿ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿ,  ತುಮ್ಮಿನಕಟ್ಟಿ  ಪದ್ಮಶಾಲಿ ಗುರುಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ರಾಂಪುರ ಶಿವಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳು, ಯಲವಟ್ಟಿ ಶ್ರೀ ಗುರು ಸಿದ್ಧಾಶ್ರಮ ಸದ್ಗುರು ಯೋಗಾನಂದ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

ಉಪ ಸಭಾಪತಿ ರುದ್ರಪ್ಪ ಲಮಾಣಿ,  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್,   ಬಿ.ಪಿ. ಹರೀಶ್, ಡಾ. ಪ್ರಭಾ ಮಲ್ಲಿಕಾರ್ಜುನ್, ಜಿ.ಎಂ‌. ಸಿದ್ದೇಶ್ವರ,  ಹೆಚ್. ಎಸ್. ಶಿವಶಂಕರ್, ಎಸ್. ರಾಮಪ್ಪ, ಹೇಮಾವತಿ ಭೀಮಪ್ಪ, ಕೆ.ಜಿ. ಕೊಟ್ಟಪ್ಪ ಗೌಡ, ಲಕ್ಷ್ಮಣ್, ಎನ್.ಜಿ. ನಾಗನಗೌಡ್ರು, ಎಂ.ಜಿ. ಪರಮೇಶ್ವರಗೌಡ್ರು, ಬಿ. ಹಾಲೇಶಪ್ಪ, ಕುಂದುರು ಮಲ್ಲೇಶಪ್ಪ, ಮಾಳಗಿ ಮಲ್ಲೇಶಪ್ಪ, ಕೆ.ಜಿ. ಸಿದ್ದಪ್ಪ, ಹರಳಹಳ್ಳಿ ಬಸವನಗೌಡ್ರು ಹಾಗೂ ಇತರರು ಭಾಗವಹಿಸಲಿದ್ದಾರೆ.

error: Content is protected !!