ಇಂಡಿಯನ್ ಸೌಹಾರ್ದ ಕೋ-ಆಪರೇಟಿವ್‌ಗೆ 32.6 ಲಕ್ಷ ಲಾಭ

ಇಂಡಿಯನ್ ಸೌಹಾರ್ದ ಕೋ-ಆಪರೇಟಿವ್‌ಗೆ 32.6 ಲಕ್ಷ ಲಾಭ

ಸಂಘದ 6ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಿ.ಎನ್. ಹುಲುಗೇಶ್ ಸಂತಸ

ಹರಿಹರ, ಅ.18- ಇಂಡಿಯನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ 32 ಲಕ್ಷದ 6 ಸಾವಿರ ರೂ. ಲಾಭ ಗಳಿಸುವ ಮೂಲಕ ಎ ವರ್ಗದ ಶ್ರೇಣಿಯಲ್ಲಿದೆ ಎಂದು ಸೊಸೈಟಿ ಅಧ್ಯಕ್ಷ ಸಿ.ಎನ್. ಹುಲುಗೇಶ್ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ವಿದ್ಯಾನಗರದ ಐರಣಿ ಹೊಳೆಮಠ ಸಮುದಾಯ ಭವನದ ಸಭಾಂಗಣದಲ್ಲಿ ನಡೆದ ದಿ ಇಂಡಿಯನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ 6 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

2100 ಸದಸ್ಯರನ್ನು ಹೊಂದಿದ್ದು, 1 ಕೋಟಿ 81 ಲಕ್ಷದ 15 ಸಾವಿರದ 500 ರೂ. ಷೇರು ಹಣ ಹೊಂದಿದೆ. 9 ಕೋಟಿ 94 ಲಕ್ಷದ 24 ಸಾವಿರದ 415 ರೂ. ಠೇವಣಿಗಳೊಂದಿಗೆ ಬಿಲ್ಡಿಂಗ್ ಫಂಡ್ 2, 07,04, 500 ರೂ. ಇರುತ್ತದೆ. ಸಾಲ 12 ಕೋಟಿ 80 ಲಕ್ಷದ, 53 ಸಾವಿರದ 28 ರೂ. ಸಾಲ ನೀಡುವ ಮೂಲಕ ವಾರ್ಷಿಕ ವಹಿವಾಟು 1, 39, 99, 10,263 ರೂ. ವಹಿವಾಟು ನಡೆಸಿ 32 ಲಕ್ಷದ 6 ಸಾವಿರದ 113 ರೂ. ನಿವ್ವಳ ಲಾಭ ಗಳಿಸಿದೆ ಎಂದು ಅವರು ಹೇಳಿದರು.

ಸೊಸೈಟಿಯು 2,07,04,501 ರೂ. ಕಟ್ಟಡ ನಿಧಿ ಹೊಂದಿದ್ದು, ಆ ಹಣದಿಂದ ನಗರದ ಮೋಚಿ ಕಾಲೋನಿಯಲ್ಲಿ 45×39 ಅಳತೆಯ ಖಾಲಿ ಜಾಗವನ್ನು 17,48,650 ರೂ. ಕೊಟ್ಟು ಖರೀದಿ ಮಾಡಲಾಗಿದೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಸೌಹಾರ್ದ ಸೌಧ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಮತ್ತು 80 ಸಾವಿರ ರೂ. ವೆಚ್ಚದಲ್ಲಿ ಡಿಫ್ರೀಜನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ದಾವಣಗೆರೆ – ಹರಿಹರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮುರುಗೇಶ್ ಆರಾಧ್ಯ ಮಾತನಾಡಿ, 5 ವರ್ಷದಲ್ಲಿ ಇಷ್ಟೊಂದು ಪ್ರಗತಿಯನ್ನು ಹೊಂದಿರುವುದು ಹೆಮ್ಮೆಯ ಸಂಗತಿ ಯಾಗಿದೆ. ಜೊತೆಗೆ ದೂರ ದೃಷ್ಟಿಯಿಂದ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಸುಂದರ ಕಟ್ಟಡವನ್ನು ಕಟ್ಟಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದರ ಜೊತೆಗೆ ಸಿಬ್ಬಂದಿಗಳಿಗೆ ಗ್ರೂಪ್ ವಿಮೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರ್‌.ಎಸ್. ರವೀಂದ್ರನಾಥ ಮಂಡಿಸಿದರು. ನಿರ್ದೇಶಕ ಸಂಯುಕ್ತ ಸಹಕಾರಿ ಎಂ.ಆರ್. ಪ್ರಭುದೇವ್ ಬೆಂಗಳೂರು, ಹರಿಹರೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ  ಕೆ. ರವಿಚಂದ್ರನ್, ನಾರಾಯಣ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್, ಬಸವೇಶ್ವರ  ಸಹಕಾರಿ ಸಂಘದ ಅಧ್ಯಕ್ಷ ಜಿ.ಎಂ‌. ಮಂಜುನಾಥ್, ದಾವಣಗೆರೆ ಲೆಕ್ಕ ಪರಿಶೋಧಕ ಚೆನ್ನಬಸಣ್ಣ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಹೆಚ್. ಮಲ್ಲೇ ಶಪ್ಪ, ನಿರ್ದೇಶಕರಾದ ಎಂ.ಬಿ. ಪ್ರಭುದೇವ್, ಜೋಸೆಫ್ ದಿವಾಕರ್, ಭಕ್ತಸಿಂಗ್, ರೀಯಾಜ್ ಆಹ್ಮದ್, ಮಾರತಿ ಶೆಟ್ಟಿ, ವನಜಾಕ್ಷಿ, ಸೈಯದ್ ಆಸೀಫ್ ಜುನೇದಿ, ಉಮಾಶಂಕರ್, ಜಗದೀಶ್ ಚೂರಿ, ಹೆಚ್.ಎಂ‌ ಸುಕುಮಾರ್, ಸುಜಾತ ಡ್ಯಾನಿಯಲ್, ನಾಮನಿರ್ದೇಶನ ಸದಸ್ಯರಾದ ಎನ್.ಎಸ್. ಮಹೇಶ್ವರಪ್ಪ ಜಿಗಳಿ, ಕೆ. ಮಂಜುನಾಥ್, ಮೆಹರ್ವಾಡೆ,   ಸಿಬ್ಬಂದಿಗಳಾದ ಮುಖ್ಯ ಕಾರ್ಯನಿರ್ವಾಹಕ ಆರ್.ಎಸ್. ರವೀಂದ್ರನಾಥ್, ಎಸ್.ಡಿ‌.ಎ ಸಂತೋಷ ವಿ.ಡಿ. ಪಿಗ್ಮಿ ಸಂಗ್ರಾಹಕರಾದ ಎಸ್.ಎನ್. ಚಂದ್ರಶೇಖರ್, ಎ. ಮಂಜುನಾಥ್, ಟಿ.ಎಸ್. ಹನುಮಂತಪ್ಪ, ಎಸ್.ಎನ್. ಸಂದೀಪ್, ಇಮ್ಯಾನುಯಲ್ ಮಧುಕರ್, ಆರ್.ಮಲ್ಲೇಶ್, ಪಿ.ಜಿ. ಅನೀಲ್, ಎಸ್. ರವಿಕುಮಾರ್, ಸಿ ಸತೀಶ್ ಕುಮಾರ್, ಇರ್ಷದ್ ಅಲಿ, ಎಸ್ ಅರುಣ್ ಕುಮಾರ್,  ಷೇರುದಾರರಾದ ಕೃಷ್ಣಮೂರ್ತಿ, ಗೋಪಾಲ, ಸಮಾಜ ಸೇವಕ ಸನಾವುಲ್ಲಾ ಸಾಬ್, ಇತರರು ಹಾಜರಿದ್ದರು.

error: Content is protected !!