ನ್ಯಾಮತಿಯಲ್ಲಿ ಇಂದು `ರೈತ ಯಜಮಾನ ಎಚ್.ಎಸ್. ರುದ್ರಪ್ಪ’ ಕೃತಿ ಬಿಡುಗಡೆ

ನ್ಯಾಮತಿಯಲ್ಲಿ ಇಂದು `ರೈತ ಯಜಮಾನ ಎಚ್.ಎಸ್. ರುದ್ರಪ್ಪ’ ಕೃತಿ ಬಿಡುಗಡೆ

ಜಿಲ್ಲಾ ಮೊದಲ ಮಂತ್ರಿ, 1952 ರಿಂದ 1957ರ ಅವಧಿ ವಿಧಾನಸಭೆ ಸದಸ್ಯ, ವಿಧಾನಸಭೆ ಅಧ್ಯಕ್ಷ, ರಾಜ್ಯ ಸರ್ಕಾರದ  ಕೃಷಿ, ಅರಣ್ಯ, ನೀರಾವರಿ, ತೋಟಗಾರಿಕೆ, ಕೈಗಾರಿಕೆ, ಪಶು ಸಂಗೋಪನೆ, ಮುಜರಾಯಿ ಸಚಿವರಾಗಿ ಸೇವೆ,  ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ರೈತ ಯಜಮಾನ ಹೆಚ್.ಎಸ್. ರುದ್ರಪ್ಪನವರ ಜೀವನ ಹೋರಾಟ, ಸಾಧನೆಯ ಈ ಕೃತಿಯು ರೈತರ ಬದುಕಿಗೆ ಭಗವದ್ಗೀತೆಯಾಗಲಿ ಎಂಬುದು ಕೃತಿಕಾರರ ಆಶಯವಾಗಿದೆ.

ರುದ್ರಪ್ಪನವರ ಜೀವನ, ಹೋರಾಟ, ಸಾಧನೆ ಕುರಿತು ಕೃತಿ ಬಿಡುಗಡೆ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ನ್ಯಾಮತಿ ಮಾಂತೇಶ್ವರ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ ಎಂದು ಕೃತಿ ಸಂಪಾದಕ ಹೆಚ್.ಎಸ್. ರುದ್ರೇಶ್, ವಿಶ್ರಾಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು  ರುದ್ರಪ್ಪನವರ ಸಂಬಂಧಿಯಾಗಿದ್ದು,  ಇಂತಹ ಮಹಾನ್ ಹೋರಾಟಗಾರರ ಕುರಿತು ಬಹುದಿನಗಳಿಂದ ಹೊರ ತರಬೇಕೆಂದಿದ್ದ ಕೃತಿಯೊಂದು ಇಂದು  ಹೊರ ಬರುತ್ತಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿರುವರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನವರಾಗಿದ್ದ ಹೆಚ್.ಎಸ್. ರುದ್ರಪ್ಪನವರು ನಮ್ಮ ನಾಡು, ದೇಶ ಕಂಡ ಅಪರೂಪದ ವಿಶಿಷ್ಟ ವ್ಯಕ್ತಿಯಾಗಿ ಹೊರಹೊಮ್ಮಿದವರು.

ಎಲ್.ಎಲ್.ಬಿ. ಪದವೀಧರರಾಗಿ ಕೆಲವು ಕಾಲ ವಕೀಲ ವೃತ್ತಿ ಮಾಡಿದವರು, ಆ ದಿನಗಳಲ್ಲೇ ರೈತರ ಪರವಾಗಿ ಹೋರಾಟ ಮಾಡುವ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಭಾಗವಹಿಸಿ ಜೈಲುವಾಸ ಅನುಭವಿಸಿ ರಾಜಕೀಯ ಇಚ್ಚೆ  ಬೆಳೆಸಿಕೊಂಡು ಆ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದವರು.

ಅನೇಕ ಬರಹಗಾರರಿಂದ 44 ಲೇಖನಗಳನ್ನು ಒಳಗೊಂಡ ರೈತ ಯಜಮಾನ ಎಚ್.ಎಸ್. ರುದ್ರಪ್ಪ ಈ ಕೃತಿಯು ರೈತರ ಭಗವದ್ಗೀತೆಯಾಗಲಿ ರೈತರ ಬದುಕು ಹಸನಾಗಿಸಲಿ ಎಂಬುದಾಗಿ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ಪದಾಧಿಕಾರಿಗಳಾದ
ಮುರುಗೆಪ್ಪ ಗೌಡ, ಹಾಲಾರಾಧ್ಯ, ವೀರಪ್ಪ, ನಿಜಲಿಂಗಪ್ಪ, ಜಗದೀಶ್, ರೇವಣಪ್ಪ ಆಶಯ ವ್ಯಕ್ತಪಡಿಸಿರುವರು.

error: Content is protected !!