ಹರಿಹರ, ಆ.16- ಗೌರಿ – ಗಣೇಶ ಹಬ್ಬದ ಪ್ರಯುಕ್ತ ನಗರದ ಸಾರ್ವಜನಿಕ ವಿನಾಯಕ ಸಮಿತಿಯಿಂದ ಶುಕ್ರವಾರ ಬೆಳಗ್ಗೆ ಗಾಂಧಿ ಮೈದಾನದಲ್ಲಿ 62ನೇ ಗಣೇಶೋತ್ಸವದ ಹಂದರಗಂಬ ಪೂಜೆ ಜರುಗಿತು.
ಈ ವೇಳೆ ಸಮಿತಿಯ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್ ಮಾತ ನಾಡಿ, ಕಳೆದ ಬಾರಿಯ ವಿನಾಯಕ ಮಹೋ ತ್ಸವದಲ್ಲಿ ಚಂದ್ರಯಾನ-3ರ ವಿನ್ಯಾಸ ಜನರಿಂದ ಮನ್ನಣೆ ಪಡೆದಿತ್ತು. ಅದೇ ರೀತಿ ಈ ಬಾರಿಯೂ ಐತಿಹಾಸಿಕ ಶ್ರೀ ಹರಿಹ ರೇಶ್ವರ ಸ್ವಾಮಿಯ ಇತಿಹಾಸ ಮತ್ತು ಚರಿತ್ರೆಯ ವಿನ್ಯಾಸ ರೂಪಿಸುವ ಉದ್ದೇಶ ಹೊಂದಿ ದ್ದೇವೆ ಎಂದು ತಿಳಿಸಿದರು.
ಈ ವೇಳೆ ಚಿದಂಬರ ಜೋಯಿಸರು, ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ ನೋಟದರ್, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಸಹ ಕಾರ್ಯದರ್ಶಿ ಜಿ.ವಿ. ಪ್ರವೀಣ್, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಪಿ.ಎನ್. ವಿರುಪಾಕ್ಷಪ್ಪ, ನಾಮನಿರ್ದೇಶನ ಸದಸ್ಯರಾದ ಸಂತೋಷ ದೊಡ್ಡಮನಿ, ಜೋಸೆಫ್ ದಿವಾಕರ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಎಚ್.ಎಸ್. ರಾಘವೇಂದ್ರ, ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಎನ್. ಹುಲುಗೇಶ್, ರೇವಣಸಿದ್ದಪ್ಪ ಅಮರಾವತಿ, ಹನುಮಂತಪ್ಪ, ಜೆಡಿಎಸ್ ಮುಖಂಡ ಅಡಕಿ ಕುಮಾರ್, ಶೇಖರಗೌಡ, ಎಲ್.ಬಿ. ಹನುಮಂತಪ್ಪ, ಸತ್ಯನಾರಾಯಣ, ಎ.ಕೆ. ಭೂಮೇಶ್, ಗಣೇಶ ದುರ್ಗದ್, ರಮೇಶ್ ಗಿರಣಿ, ಎಚ್. ಶಿವಪ್ಪ ಆನಂದ್, ಕೃಷ್ಣ ರಾಜೊಳ್ಳಿ, ಆರ್. ಮಂಜುನಾಥ್, ಡ್ಯಾನ್ಸ್ ಚಂದ್ರಶೇಖರ್, ವಿಜಯ ಕುಮಾರ್ ರಟ್ಟಿಹಳ್ಳಿ, ನಾರಾಯಣ, ಅರುಣ್, ರಮೇಶ್ ಮಾನೆ, ಪ್ರೀತಂ ಬಾಬು, ಬಾಷಾ , ಸಿ.ಕೆ. ಗುರುಪ್ರಸಾದ್ ಕಂಚಿಕೇರಿ, ಲಕ್ಷ್ಮಿ ರಾಜಚಾರ್, ಭಾಗ್ಯಮ್ಮ, ನಾಗಮ್ಮ, ಜಮಿಲಾಬಿ ಇತರರಿದ್ದರು.