ದಾವಣಗೆರೆ, ಆ.12- ಬಾಂಗ್ಲಾ ದೇಶದ ಹಿಂದೂಗಳ ಮೇಲಾಗುತ್ತಿರುವ ಹಿಂಸಾತ್ಮಕ ಆಕ್ರಮಣವನ್ನು ವಿರೋಧಿಸಿ ನಗರದ ಆರ್.ಎಚ್.ಛತ್ರದ ಮುಂಭಾಗ ಹಿಂದೂ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು.
ಬಾಂಗ್ಲಾ ದೇಶದ ಹಿಂದೂಗಳ ಸುರಕ್ಷತೆಗಾಗಿ ಭಾರತ ಸರ್ಕಾರ ಸಹಿತ ವಿಶ್ವ ಸಮುದಾಯವು ಬಾಂಗ್ಲಾ ದೇಶದ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಮಿತಿಯ ಸಂಚಾಲಕ ಸತೀಶ್ ಪೂಜಾರಿ, ಸಹ ಸಂಚಾಲಕ ಸಿ.ಎಸ್. ರಾಜು, ಮಲ್ಲಿಕಾರ್ಜುನ್, ಯೋಗೇಶ್, ವೀರೇಶ್, ಮನು, ಗಜಾ ಸಂತೋಷ್, ಶಿವಾಜಿ, ಹರೀಶ್, ಜಾಗರಣ ವೇದಿಕೆಯ ವೀರೇಶ್ ಮತ್ತಿತರರಿದ್ದರು.