ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿಯಿಂದ ಪುರಸ್ಕಾರ

ದಾವಣಗೆರೆ, ಆ. 11- ನಗರದ ಮಹಾಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 85ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. 

ಅರ್ಹ ವಿದ್ಯಾರ್ಥಿಗಳು ಇದೇ ದಿನಾಂಕ 25ರೊಳಗೆ ಸಂಘದ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 1ರ ಭಾನುವಾರ ನಡೆಯಲಿರುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪುರಸ್ಕಾರ ನೀಡಲಾಗುವುದು. ವಿವರಗಳಿಗೆ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ (70190 42531, 94484 23715) ಅವರನ್ನು ಸಂಪರ್ಕಿಸಬಹುದು.

error: Content is protected !!