ಶ್ರೀ ಅಂಬಾಭವಾನಿ ದೇವಸ್ಥಾನ ನಿರ್ಮಾಣ : ನಗರದಲ್ಲಿ ಇಂದು ಸಭೆ

ಮಹಾರಾಜಪೇಟೆಯಲ್ಲಿರುವ ಶ್ರೀ ಭಾವಸಾರ ಕ್ಷತ್ರಿಯ ದೈವ ಮಂಡಳಿಯ ಶ್ರೀ ವಿಠ್ಠಲ ಮಂದಿರ ದಲ್ಲಿ ಇಂದು ಸಂಜೆ 5 ಗಂಟೆಗೆ ಅಂಬಾಭವಾನಿ ದೇವಸ್ಥಾನದ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣದ ಬಗ್ಗೆ ಪೂರ್ವಭಾವಿ ಸಭೆ ನಡೆಯಲಿದೆ. 

ಸಮಾಜದ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಗುಜ್ಜರ್ ಅವರ ನೇತೃತ್ವದಲ್ಲಿ ಏರ್ಪಾಡಾಗಿರುವ ಈ ಸಭೆಯಲ್ಲಿ ನಗರದ  ಪಿ. ಬಿ. ರಸ್ತೆಯಲ್ಲಿರುವ ದೈವ ಮಂಡಳಿಯ ಜಮೀನಿನಲ್ಲಿ ಅಂಬಾಭವಾನಿ ದೇವಸ್ಥಾನ ನಿರ್ಮಾಣದ  ಬಗ್ಗೆ ಪೂರ್ವಭಾವಿ ಸಭೆ  ಹಮ್ಮಿಕೊಳ್ಳಲಾಗಿದೆ 

ದೈವ ಮಂಡಳಿ, ಭಜನಾ ಮಂಡಳಿ, ತರುಣ ಮಂಡಳ,  ಕಲಾವತಿ ಮಹಿಳಾ ಮಂಡಳಿ, ರುಖುಮಾಯಿ ಮಹಿಳಾ ಮಂಡಳಿ, ಶ್ರೀ ದುರ್ಗಾ ಮಹಿಳಾ ಮಂಡಳಿ,  ಇತರೆ ಎಲ್ಲಾ ಅಂಗ ಸಂಸ್ಥೆಗಳು, ಸಮಾಜ ಬಾಂಧವರು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ದೈವ ಮಂಡಳಿಯ ಗೌರವಾಧ್ಯಕ್ಷ ಡಾ. ಜಯಪ್ರಕಾಶ್ ಮಾಳದಕರ್, ಅಧ್ಯಕ್ಷ ರಘು ಮುಸಳೆ, ಕಾರ್ಯದರ್ಶಿ ಈಶ್ವರ್ ರಾವ್ ಗುಜ್ಜರ್ ಕೋರಿದ್ದಾರೆ.

error: Content is protected !!