ಪ್ಲಾಸ್ಟಿಕ್ ಧ್ವಜಗಳು ನಿಷೇಧ

ದಾವಣಗೆರೆ, ಆ. 6 – ಆಗಸ್ಟ್ 15 ರಂದು ಆಚರಿಸಲಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮತ್ತು ಉಪಯೋಗಿಸದಂತೆ ಪರಿಸರ ಅಧಿಕಾರಿ ಡಾ.ಹೆಚ್. ಲಕ್ಷ್ಮಿಕಾಂತ ತಿಳಿಸಿದ್ದಾರೆ.

 ರಾಷ್ಟ್ರ ಧ್ವಜವನ್ನು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿರುವ ಹಾಗೂ ಹತ್ತಿ ಪಾಲಿಸ್ಟರ್, ಉಣ್ಣೆ, ರೇಷ್ಮೆ ಖಾದಿಯಿಂದ ಮಾಡಿರುವ ಧ್ವಜಗಳನ್ನು ಬಳಸಬಹುದು. ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವಂತಹ ಅಂಗಡಿ ಮಾಲೀಕರುಗಳ ವಿರುದ್ದ ಪ್ಲಾಸ್ಟಿಕ್ ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ ಯಡಿಯಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

error: Content is protected !!