ಎದೆಹಾಲನ್ನು ಕಾರ್ಖಾನೆಗಳಿಂದ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ

ಎದೆಹಾಲನ್ನು ಕಾರ್ಖಾನೆಗಳಿಂದ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ

ಮಲೇಬೆನ್ನೂರು, ಆ. 6 –  ಸಾರಥಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು    ಟಿ ಹೆಚ್ ಒ ಡಾ ಅಬ್ದುಲ್ ಖಾದರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆ ಹಾಲನ್ನು ನೀಡಬೇಕು. ಕೊಲೆಸ್ಟ್ರಮ್‌ನಲ್ಲಿ ಅತಿ ಹೆಚ್ಚು ವಿಟಮಿನ್ ಎ ಮತ್ತು ರೋಗ ನಿರೋಧಕಗಳಿರುತ್ತವೆ. ಇದು ಶಿಶುವನ್ನು ಭೇದಿ ಧನುರ್ವಾಯು ಮತ್ತು ಶ್ವಾಸನಾಳದ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಪದೇಪದೇ ಎದೆ ಹಾಲು ನೀಡುವುದರಿಂದ ತಾಯಿಯ ಸ್ಥನಗಳಲ್ಲಿ ಗಂಟುಗಳಾಗದಂತೆ ರಕ್ಷಿಸುತ್ತದೆ. ನವಜಾತ ಶಿಶು ಎದೆಹಾಲನ್ನು ಹೀರುವುದರಿಂದ  ಆಕ್ಸಿಟೋಸಿನ್ ಬಿಡುಗಡೆಗೆ ಸಹಾಯಕವಾಗುತ್ತದೆ. ಇದರಿಂದ ಗರ್ಭಕೋಶ ಕುಗ್ಗಿಗೆ ಸಹಾಯವಾಗಿ ಅದು ಪ್ರಸವೋತ್ತರ ರಕ್ತಸ್ರಾವವನ್ನು ತಡೆಯಲು ನೆರವಾಗುತ್ತದೆ ಎಂದು ಹೇಳಿದರು. 

ಮಗುವಿನ ಉತ್ತಮ ಬೆಳವಣಿಗೆಗೆ ಹಾಗೂ ಉನ್ನತ ವ್ಯಕ್ತಿತ್ವ ರೂಪಿಸಲು ಎದೆ ಹಾಲು ಸಹಕಾರಿ. ಎದೆ ಹಾಲನ್ನು ಉಣಿಸುವಿಕೆ ತಾಯಿ ಮತ್ತು ಶಿಶುವಿನ ಬಾಂಧವ್ಯ ವೃದ್ಧಿಗೆ ಆಧಾರ ಸ್ತಂಭವಾಗಲಿದೆ ಎಂದರು. 

ತಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮಾತನಾಡಿ, ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ನೀಡಬೇಕು.  ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಮೆದು ಪೂರಕ ಆಹಾರವನ್ನು ನೀಡುವುದರೊಂದಿಗೆ ಎರಡು ವರ್ಷಗಳ ಕಾಲ ಎದೆಹಾಲನ್ನು ಉಣಿಸುವುದು ಬಹು ಮುಖ್ಯವಾಗಿರುತ್ತದೆ ಎಂದರು.

 ಸಭೆಯಲ್ಲಿ  ತಿಪ್ಪೇಸ್ವಾಮಿ, ರಂಗನಾಥ, ಕಾವ್ಯ ಮತ್ತಿತರರು  ಭಾಗವಹಿಸಿದ್ದರು.

error: Content is protected !!