ಸತ್ತ ಮೇಲೂ ಸಮಾಜ ಸೇವೆ ಮಾಡಿ

ದಾವಣಗೆರೆ, ಆ.6- ಪ್ರತಿ ವರ್ಷವು ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಲ್ಲಿ ದೇಹ ದಾನಿಗಳ ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಸುತ್ತೋಲೆ   ಶ್ಲ್ಯಾಘನೀಯವಾಗಿದೆ.

ಸರ್ಕಾರದ ಈ ನಡೆ ದೇಹ ದಾನಿಗಳ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸುವ ಜತೆಗೆ ದೇಹ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿಯೂ ಸಹಕಾರಿಯಾಗುತ್ತದೆ.

ಸಹಜ ಮರಣದಿಂದ ಮಾತ್ರ ನೇತ್ರದಾನ ಮತ್ತು ದೇಹದಾನ ಸಾಧ್ಯ. ಈ ನಿಟ್ಟಿನಲ್ಲಿ ದೇಹ ದಾನ ಮಾಡುವುದು ಅತ್ಯಂತ್ರ ಪವಿತ್ರ ಹಾಗೂ ಸಮಾಜಕ್ಕೆ ಪ್ರಯೋಜನಕಾರಿಯಾದ ನಿಸ್ವಾರ್ಥ ಸೇವೆಯಾಗಿದೆ.

ದಾನ ಮಾಡಿದ ಅಂಗಾಂಗಗಳು ಇತರರ ಜೀವ ಉಳಿಸಲು ಅಥವಾ ಜೀವನ ಸುಧಾರಿಸಲು ಸಹಕಾರಿ ಆಗುತ್ತವೆ. ಅಲ್ಲದೇ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಹಾಗೂ ಸಂಶೋಧನೆಗೆ ನೆರವಾಗಲಿದೆ.

ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಬದಲು, ದೇಹದಾನ ಮಾಡಿದರೆ ಸಮಾಜಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ಯಾರಾದರೂ ಸತ್ತ ನಂತರ ತಮ್ಮ ದೇಹದಾನ ಮಾಡಲು ಬಯಸಿದ್ದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟಿಗೆ ಸಂಪರ್ಕಿಸಿದರೆ ಸರಿಯಾದ ಮಾಹಿತಿ ಒದಗಿಸಲಿದ್ದೇವೆ. ಮಾಹಿತಿಗಾಗಿ  9886645880 ಸಂಪರ್ಕಿಸಿ.

error: Content is protected !!